ಮನೆ ರಾಜ್ಯ ಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್: ಎಸ್.ಟಿ.ಸೋಮಶೇಖರ್

ಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್: ಎಸ್.ಟಿ.ಸೋಮಶೇಖರ್

0

ಬೆಂಗಳೂರು: ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌, ಜನಪರ ಬಜೆಟ್. ಸಮಾಜದ ಎಲ್ಲ ವರ್ಗಗಳ ನಿರೀಕ್ಷೆಯನ್ನು ಪೂರೈಸಲಿದೆ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಇದಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದರಿಂದ ಮಧ್ಯ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ವರದಾನವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

7 ಲಕ್ಷದವರೆಗೆ ವೈಯಕ್ತಿಕ ತೆರಿಗೆ ವಿನಾಯ್ತಿ, ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂ. ಮಿಸಲು, 50 ಹೊಸ ಏರ್ ಪೋರ್ಟ್ ಗಳ ಸ್ಥಾಪನೆ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಘೋಷಣೆ ಮಾಡಲಾಗಿದೆ.

ಒಟ್ಟಾರೆ ಈ ಬಜೆಟ್ ಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್ ಎಂದು ಸಚಿವರು ತಿಳಿಸಿದ್ದಾರೆ.

ಹಿಂದಿನ ಲೇಖನತಂಬಾಕು ನಿಯಂತ್ರಣ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸೂಚನೆ
ಮುಂದಿನ ಲೇಖನಹನೂರು: ವಿದ್ಯುತ್ ಆಘಾತದಿಂದ ಹೆಣ್ಣಾನೆ ಸಾವು