ನವದೆಹಲಿ: ಹಣಕಾಸು ಇಲಾಖೆಯ ಲೆಕ್ಕಪತ್ರ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉಧಮ್’ಪುರ, ರಜೌರಿ ಹಾಗೂ ದೊಡ ಸೇರಿದಂತೆ 37 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಸೇವಾ ನೇಮಕಾತಿ ಮಂಡಳಿ (ಜೆಕೆಎಸ್’ಎಸ್’ಬಿ) ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕಳೆದ ವರ್ಷ (2022ರ) ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಜೆಕೆಎಸ್’ಎಸ್’ಬಿ ಮಾಜಿ ಸದಸ್ಯ ನೀಲಂ ಖಜುರಿಯಾ, ನೇಮಕಾತಿ ಅಧಿಕಾರಿಗಳಾದ ಅಂಜು ರೈನಾ ಹಾಗೂ ಕರ್ನೆಲ್ ಸಿಂಗ್ ಸೇರಿದಂತೆ 20 ಮಂದಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದೆ.
ನೇಮಕಾತಿ ಪರೀಕ್ಷೆಯು 2022ರ ಮಾರ್ಚ್ 6ರಂದು ನಡೆದಿತ್ತು. ಅದೇ ವರ್ಷ ಏಪ್ರಿಲ್ 21ರಂದು ಫಲಿತಾಂಶ ಪ್ರಕಟವಾಗಿತ್ತು.














