ಮನೆ ಅಪರಾಧ ಮಸೀದಿ ಮೇಲಿನ ದಾಳಿ ಹೊಣೆ ಹೊತ್ತ ಐಎಸ್

ಮಸೀದಿ ಮೇಲಿನ ದಾಳಿ ಹೊಣೆ ಹೊತ್ತ ಐಎಸ್

0

ಪೆಶಾವರ (ಪಾಕಿಸ್ತಾನ): ಪಾಕಿಸ್ತಾನದ ನಗರ ಪೆಶಾವರದಲ್ಲಿನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಆತ್ಮಾಹುತಿ ಬಾಂಬ್‌ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಹೊತ್ತಿದೆ.

ಘಟನೆಯಲ್ಲಿ ಕನಿಷ್ಠ 56 ಜನರು ಮೃತಪಟ್ಟಿದ್ದು, 194 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ಏಕಾಂಗಿಯಾಗಿ ತೆರಳಿದ ಅಫ್ಗಾನಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಕೋರ ಈ ಕೃತ್ಯ ನಡೆಸಿದ್ದ ಎಂದು ಇಸ್ಲಾಮಿಕ್ ಸ್ಟೇಟ್ ತಿಳಿಸಿದೆ.

ಅಫ್ಗಾನಿಸ್ತಾನದ ಖುರಾಸನ್ ಪ್ರಾಂತ್ಯದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಘಟಕವು ಈ ಕೃತ್ಯ ನಡೆಸಿರುವುದಾಗಿ ಹೇಳಿದೆ.ಐಎಸ್‌ನೊಂದಿಗೆ ನಂಟು ಹೊಂದಿರುವ ‘ಅಮಾಕ್ ನ್ಯೂಸ್ ಏಜೆನ್ಸಿ’ಯ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ದಾಳಿಕೋರ ಅಫ್ಗನ್‌ ಆಗಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಅತನ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಹಿಂದಿನ ಲೇಖನಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ ರಾಜ್ಯ : ಬಜೆಟ್; ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಅಂತರರಾಜ್ಯ ಜಲವಿವಾದ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ಅಗತ್ಯ: ಸಿಎಂ ಬೊಮ್ಮಾಯಿ