ಮನೆ ಜ್ಯೋತಿಷ್ಯ ಹುಬ್ಬು ಕೂಡಿದ್ದರೆ ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಮಾಹಿತಿ

ಹುಬ್ಬು ಕೂಡಿದ್ದರೆ ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಮಾಹಿತಿ

0

ಹೆಣ್ಣು ಮಕ್ಕಳು ಸುಂದರವಾಗಿ ಕಾಣಬೇಕು ಎಂದು ಐ ಬ್ರೋಸ್ ಮಾಡಿಸಿಕೊಳ್ಳುತ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋದಾಗ 2 ಹುಬ್ಬುಗಳ ಮಧ್ಯೆ ಸಹ ಕೂದಲಿದ್ದರೆ ಅದನ್ನು ತೆಗೆಸಿಬಿಡುತ್ತಾರೆ. ಏಕೆಂದರೆ ಅದು ಮುಖದ ಅಂದವನ್ನು ಹಾಳು ಮಾಡುತ್ತದೆ ಎಂದು.

Join Our Whatsapp Group

ಆದರೆ ಜ್ಯೋತಿಷ್ಯದ ಪ್ರಕಾರ ಹುಬ್ಬುಗಳು ಕೂಡಿರುವುದರ ಹಿಂದೆ ಸಹ ಒಂದು ಅರ್ಥವಿದೆ. 2 ಹುಬ್ಬುಗಳು ಕೂಡಿದ್ದರೆ ಕೆಲವರಿಗೆ ಒಳ್ಳೆಯದಾಗುತ್ತದೆ ಹಾಗೆಯೇ ಇನ್ನೂ ಕೆಲವರಿಗೆ ಅದರಿಂದ ಕೆಟ್ಟದ್ದಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಈ ಹುಬ್ಬು ಕೂಡಿದ್ದರೆ ಯಾರಿಗೆ ಒಳ್ಳೆಯದು ಹಾಗೂ ಯಾರಿಗೆ ಕೆಟ್ಟದ್ದು ಎಂಬುದು ಇಲ್ಲಿದೆ.

ನಂಬಿಕೆಗಳ ಪ್ರಕಾರ ಹೆಣ್ಣು ಮಕ್ಕಳಿಗೆ ಹುಬ್ಬು ಕೂಡಿದ್ದರೆ ಬಹಳ ಉತ್ತಮವಂತೆ. ಇದರಿಂದ ಅವರಿಗೆ ತುಂಬಾ ಒಳ್ಳೆಯದಾಗುತ್ತದೆ. ಯಾವ ಹೆಣ್ಣು ಮಕ್ಕಳ ಹುಬ್ಬು ಕೂಡಿರುತ್ತದೆಯೋ ಅವರು ಅದೃಷ್ಟವಂತರಂತೆ. ಅಲ್ಲದೇ, ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರಂತೆ.

ಅಲ್ಲದೇ ಈ ರೀತಿ ಹುಬ್ಬು ಹೊಂದಿರುವ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಯರಾಗುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕೂಡಿರುವ ಹುಬ್ಬನ್ನ ತೆಗೆಸಬಾರದು. ಇದರಿಂದ ನಮ್ಮ ಅದೃಷ್ಟವನ್ನ ನಾವೇ ಹಾಳು ಮಾಡಿಕೊಂಡ ಹಾಗೆ.

ಇನ್ನು ಪುರುಷರ ವಿಚಾರಕ್ಕೆ ಬಂದರೆ ಅವರಿಗೆ ಹುಬ್ಬು ಕೂಡಿರಲೇಬಾರದು ಎನ್ನಲಾಗುತ್ತದೆ. ಹುಬ್ಬು ಕೂಡಿರುವ ಪುರುಷರಿಗೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿರುತ್ತದೆ. ಅಲ್ಲದೇ, ಕಷ್ಟಗಳು ಸಾಲು ಸಾಲಾಗಿ ಬರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಅಲ್ಲದೇ, ಹುಬ್ಬು ಕೂಡಿರುವ ಪುರುಷರು ಯಾವುದೇ ಕೆಲಸವನ್ನು ಮಾಡಲು ಹೊರಟರೂ ಸಹ ಬಹಳ ಕಷ್ಟಪಡಬೇಕಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಾಧ್ಯವಾದರೆ ಮಧ್ಯ ಕೂಡಿರುವ ಹುಬ್ಬನ್ನ ತೆಗೆಸುವುದು ಉತ್ತಮ.

 (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ.)