ಮನೆ ಜ್ಯೋತಿಷ್ಯ ಕುಂಭ ರಾಶಿಗೆ ಶನಿ ಪ್ರವೇಶ: ಈ ರಾಶಿಗಳಿಗೆ ಸಂಕಷ್ಟ

ಕುಂಭ ರಾಶಿಗೆ ಶನಿ ಪ್ರವೇಶ: ಈ ರಾಶಿಗಳಿಗೆ ಸಂಕಷ್ಟ

0

ನ್ಯಾಯದ ಗ್ರಹ, ಶನಿದೇವನು ಈ ವರ್ಷ ತನ್ನ ರಾಶಿಯನ್ನು ಬದಲಾವಣೆ ಮಾಡಿಕೊಂಡಿದ್ದಾನೆ. ಏಪ್ರಿಲ್ 29, 2022 ರಂದು ಶನಿ ದೇವನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿನ ಶನಿ ದೇವನ ಪ್ರಯಾಣವು ಕೊನೆಯಾಗಲಿದೆ.

ಶನಿಯು ಕುಂಭ ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ. 5 ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ಈ ನಡುವೆ ರಾಶಿ ಬದಲಾವಣೆ ಮಾಡುವುದಕ್ಕೂ ಮೊದಲೇ ಶನಿದೇವ 33 ದಿನ ಅಸ್ಯವಾಗಲಿದ್ದಾನೆ. ಜ್ಯೋತಿಷ್ಯದಲ್ಲಿ, ಗ್ರಹಗಳ ಬದಲಾವಣೆ ಮತ್ತು ಗ್ರಹಗಳ ನಿಲುವು ಎಲ್ಲವೂ ರಾಶಿಗಳ ಮೇಲೆ ಖಂಡಿತವಾಗಿಯೂ ವಿಶೇಷ ಪರಿಣಾಮವನ್ನು ಬೀರುತ್ತದೆ. ಶನಿ ದೇವನು ಜನವರಿ 22 ರಂದು ಅಸ್ತವಾಗುತ್ತಾನೆ. ಬಳಿಕ 24 ಫೆಬ್ರವರಿ 2022 ರಂದು ಮತ್ತೆ ಉದಯಿಸುತ್ತಾನೆ.

ಹೊಸ ವರ್ಷದಲ್ಲಿ ಮಕರ ರಾಶಿಯಲ್ಲಿ ಮೂರು ಗ್ರಹಗಳು. ಈ ರಾಶಿಗಳಿಗೆ ಸಂಕಷ್ಟ 33 ದಿನಗಳವರೆಗೆ ಶನಿಯು ಅಸ್ತವಾಗುವ ಕಾರಣದಿಂದಾಗಿ ಇದು ಖಂಡಿತವಾಗಿಯೂ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, 33 ದಿನಗಳವರೆಗೆ, ಕೆಲವು ರಾಶಿಗಳ ಜನರ ಮೇಲೆ ಪರಿಣಾಮ ಬೀರಲಿದೆ. ಕೆಲವು ರಾಶಿಗಳ ಜನರು 33 ದಿನಗಳವರೆಗೆ, ತೊಂದರೆ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಕರ್ಕಾಟಕ ರಾಶಿಯ ಜನರು ಶನಿಯು ಅಸ್ತಮಿಸಿದಾಗ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಕೆಲಸ ಮಾಡುವವರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಉನ್ನತ ಅಧಿಕಾರಿಗಳೊಂದಿಗಿನ ನಿಮಗೆ ವೈಮನಸ್ಸು ಉಂಟಾಗಬಹುದು.ನೀವು ಕೆಲಸ ಮಾಡಲು ಬಯಸದ ಸ್ಥಿತಿ ಉಂಟಾಗಬಹುದು. ಹಣದ ನಷ್ಟ ಉಂಟಾಗುವ ಸಾಧ್ಯತೆಗಳು ಕೂಡಾ ಇದೆ. ಯಾವುದೇ ಅಜಾಗರೂಕತೆ ಮಾಡಿದರೂ, ನೀವು ಗಂಭೀರ ಪರಿಣಾಮಗಳನ್ನು ಸಹ ಅನುಭವಿಸಬೇಕಾಗುತ್ತದೆ.

ಮಿಥುನ ರಾಶಿ ಭವಿಷ್ಯ ಪ್ರಕಾರ, ಶನಿಯ ಅಸ್ತವು ಮಿಥುನ ರಾಶಿಯ ಜನರಿಗೆ ಬಹಳ ಸಂಕಷ್ಟವನ್ನು ಉಂಟು ಮಾಡಲಿದೆ. ಕಾರ್ಯಗಳಲ್ಲಿ ನಿರಂತರ ವೈಫಲ್ಯದಿಂದಾಗಿ ನಿಮ್ಮ ಮನಸ್ಸು ಅತೃಪ್ತವಾಗಬಹುದು. ಈ ಸಮಯದಲ್ಲಿ, ಮಿಥುನ ರಾಶಿಯ ಜನರು ಶನಿಯ ದೋಷವನ್ನು ಎದುರಿಸುತ್ತಾರೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಣವನ್ನು ನೀವು ಅತಿಯಾಗಿ ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಜಗಳವಾಗಬಹುದು. ಯಾರಿಗಾದರೂ ಸಾಲ ನೀಡುವುದರಿಂದ ನಿಮ್ಮ ಮನಸ್ಸು ಚಂಚಲವಾಗಲಿದೆ. ಉದ್ಯೋಗದಲ್ಲಿ ಸಮಸ್ಯೆಗಳಿರಬಹುದು ಮತ್ತು ಮುಂಬರುವ 33 ದಿನಗಳು ವ್ಯಾಪಾರ ಮಾಡುವ ಜನರಿಗೆ ಯಾವುದೇ ವಿಶೇಷ ಲಾಭ ಉಂಟು ಮಾಡದು.

 ಕನ್ಯಾ ರಾಶಿ 33 ದಿನಗಳ ಕಾಲ ಶನಿಯ ಅಸ್ತವ್ಯಸ್ತವಾಗಿರುವುದರಿಂದ ಕನ್ಯಾ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಯಾವುದೇ ಕೆಲಸ ಮಾಡಲು ನಿಮಗೆ ಮನಸ್ಸು ಬರಲಾರದು. ಇದರಿಂದಾಗಿ ಉದ್ಯೋಗ ಸ್ಥಳದಲ್ಲಿ ತೊಂದರೆ ಉಂಟಾಗಬಹುದು. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ಯಶಸ್ಸನ್ನು ಸಾಧಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ನಿಮ್ಮ ತಂದೆಯೊಂದಿಗಿನ ವಿವಾದದಿಂದಾಗಿ, ನಿಮ್ಮ ಮನಸ್ಸು ಚಡಪಡಿಸುತ್ತಲಿರುತ್ತದೆ. ಇದರಿಂದಾಗಿ ಯಾವುದೇ ಕೆಲಸವನ್ನು ಮಾಡುವಾಗಲೂ ಏಕಾಗ್ರತೆ ಇರುವುದಿಲ್ಲ.

ತುಲಾ ರಾಶಿಯ ಜನರು ಶನಿಗ್ರಹದ ಅಸ್ತದಿಂದಾಗಿ ಕೆಟ್ಟ ಪರಿಣಾಮವನ್ನು ಅನುಭವಿಸುತ್ತಾರೆ. ಯಾವುದೇ ವಿಚಾರದಲ್ಲಿಯೂ ಚರ್ಚೆ ಅಧಿಕವಾಗುವ ಕಾರಣದಿಂದಾಗಿ ನಿಮ್ಮ ಚಿಂತೆಯೂ ಕೂಡಾ ಹೆಚ್ಚಾಗಲಿದೆ. ನೀವು ಯಾವುದೇ ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಬಹುದು. ಇದರಿಂದಾಗಿ ನೀವು ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ಸಹ ಎದುರಿಸಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.

ಹಿಂದಿನ ಲೇಖನಐಪಿಎಲ್ 2022 ಹರಾಜು: 2 ಕೋಟಿ ರೂ ಬೆಲೆಯ ಭಾರತದ ಆಟಗಾರರು
ಮುಂದಿನ ಲೇಖನಅಗ್ನಿ ಅವಘಡ: 7 ಮಂದಿ ದುರ್ಮರಣ, 17ಕ್ಕೂ ಹೆಚ್ಚು ಮಂದಿಗೆ ಗಾಯ