ಚಿಕ್ಕಮಗಳೂರು: ಜೆಡಿಎಸ್ ನದ್ದು ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿಗೆ ಮತ ಹಾಕಿ ಎಂದ ಎಸ್.ಎಲ್.ಭೋಜೇಗೌಡರಿಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ. ಸಾಮರ್ಥ್ಯವಿದ್ದರೆ ಜಿಲ್ಲೆಯಲ್ಲಿ ಜೆಡಿಎಸ್ ಗೆ ಮತ ಹಾಕಬೇಡಿ ಎಂದು ಹೇಳಿ ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ. ಆತ ಫ್ಲೆಕ್ಸ್ ಹಾಕೋಕೆ ಅಷ್ಟೇ ಸೀಮಿತಾನ ಕಳೆದ ಬಾರಿ ಹರೀಶನ ಮನೆ, ಈ ಬಾರಿ ತಿಮ್ಮಶೆಟ್ಟಿ ಮನೆ ಹಾಳು ಅಂತಿದ್ದಾರೆ ಜನ. ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಬೇರೆಯವರ ಮನೆ ಹಾಳು ಮಾಡಿದರೆ ಒಂದು ದಿನ ನಮ್ಮ ಮನೆಯನ್ನು ಹಾಳು ಮಾಡುತ್ತದೆ. ಎಸ್.ಡಿ.ಪಿ.ಐ, ಪಿ.ಎಫ್.ಐ, ಸಿ.ಪಿ.ಐ, ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಲುಮತ ಸಮಾಜ ಹಾಲಿನಂತಹಾ ಮನಸ್ಸು ಇರುವವರು ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಕುರುಬ ಸಮಾಜ ಹೆಚ್ಚಿರುವ ಊರುಗಳಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಬರುತ್ತದೆ ಎಂದರು.
ಬಸವರಾಜ ಬೊಮ್ಮಾಯಿ ಅವರೇ ನಮ್ಮ ಮುಖ್ಯಮಂತ್ರಿಗಳು. ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿರುವುದು. ಸಿ.ಟಿ.ರವಿ ಸಿಎಂ ಆಗಬೇಕು ಎಂಬುವುದು ಜನರ ಅಪೇಕ್ಷೆ, ಪಕ್ಷದ ನಿರ್ಣಯ ಅಲ್ಲ ಎಂದರು.