ಮನೆ ರಾಜ್ಯ 989 ಮಂದಿಗೆ ಕೋವಿಡ್‌ ಪಾಸಿಟಿವ್‌

989 ಮಂದಿಗೆ ಕೋವಿಡ್‌ ಪಾಸಿಟಿವ್‌

0

ಬೆಂಗಳೂರು (Bengaluru): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 989 ಕೋವಿಡ್‌ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,78,079ಕ್ಕೆ ಏರಿಕೆಯಾಗಿದೆ.

802 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 6,693 ಸಕ್ರಿಯ ಪ್ರಕರಣಗಳಿದೆ. ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 927 ಹೊಸ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 18,12,065ಕ್ಕೆ ಏರಿಕೆಯಾಗಿದೆ. 6,239 ಸಕ್ರಿಯ ಪ್ರಕರಣಗಳಿವೆ.

27,535 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಸೋಂಕಿನ ಪ್ರಮಾಣ ಶೇ.3.59%ರಷ್ಟಿದ್ದು, ಮರಣ ಪ್ರಮಾಣ 0.00ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹಿಂದಿನ ಲೇಖನಸೂರ್ಯ ದೇವನನ್ನು ಪೂಜಿಸಲು ಇಲ್ಲಿದೆ ಮಂತ್ರ
ಮುಂದಿನ ಲೇಖನ40 ಬಳಿಕ ವ್ಯಾಯಾಮಾ: ಪಾಲಿಸಬೇಕಾದ ಸಲಹೆಗಳು