ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿಂದು ಅನೇಕ ಬ್ರ್ಯಾಂಡ್ ಗಳು ಹುಟ್ಟುಕೊಂಡಿವೆ. ಇದರಲ್ಲಿ ಮುಖ್ಯವಾಗಿ ರಿಯಲ್ ಮಿ, ರೆಡ್ಮಿ, ಸ್ಯಾಮ್ಸಂಗ್, ಒಪ್ಪೋ ದಂತಹ ಮೊಬೈಲ್ ಗಳಿಗೆ ದೇಶದಲ್ಲಿ ಭರ್ಜರಿ ಬೇಡಿಕೆ ಇದೆ. ಇವುಗಳು ಕಡಿಮೆ ಬೆಲೆಗೆ ಆಕರ್ಷಕ ಫೀಚರ್ ಗಳ ಫೋನ್ ಅನ್ನು ರಿಲೀಸ್ ಮಾಡುವುದರಿಂದ ಎಗ್ಗಿಲ್ಲದೆ ಸೇಲ್ ಆಗುತ್ತದೆ. ಆದರೀಗ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಈ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಗಳು ತನ್ನ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಟ್ವಿಟರ್ ಬಳಕೆದಾರರೊಬ್ಬರು ಈ ಬಗ್ಗೆ ಶಾಕಿಂಗ್ ಆರೋಪವನ್ನು ಮಾಡಿದ್ದು, ರಿಯಲ್ ಮಿ ಕಂಪನಿ ತನ್ನ ಫೋನ್ ಬಳಸುವ ಬಳಕೆದಾರರ ಕರೆ ಲಾಗ್ ಗಳು, ಎಸ್ ಎಂಎಸ್ ಮತ್ತು ಸ್ಥಳದ ಕುರಿತು ಸೇರಿದಂತೆ ಗೌಪ್ಯ ಮಾಹಿತಿಯನ್ನು ಸೂಕ್ಷ್ಮವಾಗಿ ‘ಎನ್ ಹಾನ್ಸ್ ಡ್ ಇಂಟೆಲಿಜೆಂಟ್ ಸರ್ವಿಸಸ್’ ಎಂಬ ಫೀಚರ್ಸ್ ಮೂಲಕ ಮೂಲಕ ಸಂಗ್ರಹಿಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆದರೆ, ರಿಯಲ್ ಮಿ ಈ ಆರೋಪವನ್ನು ತಳ್ಳು ಹಾಕಿದ್ದು ಸ್ಪಷ್ಟನೆ ನೀಡಿದೆ.
“ಗ್ರಾಹಕರು ಉತ್ತಮ ಬ್ಯಾಟರಿ ಬಾಳಿಕೆ ಮತ್ತು ತಾಪಮಾನದ ಕಾರ್ಯಕ್ಷಮತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮಾತ್ರ ಎನ್ ಹಾನ್ಸ್ ಡ್ ಇಂಟೆಲಿಜೆಂಟ್ ಸರ್ವಿಸಸ್ ವೈಶಿಷ್ಟ್ಯವನ್ನು ಆಪ್ಟಿಮೈಜ್ ಮಾಡಲು ಲಿಂಕ್ ಮಾಡಲಾಗಿದೆ ಬಿಟ್ಟರೆ ಇತರೆ ಯಾವುದೇ ಕಾರಣಕ್ಕಲ್ಲ. ಆದಾಗ್ಯೂ, ನಾವು SMS, ಫೋನ್ ಕರೆಗಳು, ವೇಳಾಪಟ್ಟಿಗಳು ಇತ್ಯಾದಿಗಳಲ್ಲಿ ಯಾವುದೇ ಡೇಟಾವನ್ನು ಕಲೆಹಾಕುವುದಿಲ್ಲ. ಈ ಸೇವೆಯಲ್ಲಿ ಪ್ರಕ್ರಿಯೆಗೊಳಿಸಲಾದ ಎಲ್ಲಾ ಡೇಟಾವನ್ನು ಎನ್ಕ್ರಿಪ್ಟ್ ಮಾಡಲಾಗಿದೆ ಮತ್ತು ಆಂಡ್ರಾಯ್ಡ್ ಭದ್ರತಾ ಕಾರ್ಯವಿಧಾನಗಳಿಗೆ ಬಳಕೆದಾರರ ಸಾಧನದಲ್ಲಿ ಎನ್ಕ್ರಿಪ್ಟ್ ಮಾಡಿದ ಹಾರ್ಡ್ ವೇರ್ ನಲ್ಲಿ ಸಂಗ್ರಹಿಸಲಾಗಿದೆ. ಈ ಎಲ್ಲ ಡೇಟಾವನ್ನು ಸಂಪೂರ್ಣವಾಗಿ ಮೊಬೈಲ್ನಲ್ಲಿ ಸಂಗ್ರಹಿಸಲಾಗಿದೆ ಮತ್ತು ಬೇರೆಲ್ಲಿಯೂ ಹಂಚಿಕೊಳ್ಳಲಾಗುವುದಿಲ್ಲ ಅಥವಾ ಕ್ಲೌಡ್ ನಲ್ಲಿ ಅಪ್ಲೋಡ್ ಮಾಡಲಾಗುವುದಿಲ್ಲ. ನಾವು ಬಳಕೆದಾರರ ಗೌಪ್ಯತೆ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಮತ್ತು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ಎನ್ ಹಾನ್ಸ್ ಡ್ ಇಂಟೆಲಿಜೆಂಟ್ ಸರ್ವಿಸಸ್ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಬಹುದು,” ಎಂದು ರಿಯಲ್ ಮಿ ಹೇಳಿದೆ.
ವರ್ಧಿತ ಇಂಟೆಲಿಜೆನ್ಸ್ ಸೇವೆಗಳ ಫೀಚರ್ಸ್ ರಿಯಲ್ ಮಿ ಸ್ಮಾರ್ಟ್ ಫೋನ್ ಗಳಿಗೆ ಮಾತ್ರವಲ್ಲದೆ ಇತರೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿಯೂ ಕಾಣಿಸಿಕೊಂಡಿದೆ. ಅಂತಹುದರಲ್ಲಿ ಒನ್ ಪ್ಲಸ್, ಸ್ಯಾಮ್ ಸಂಗ್, ಒಪ್ಪೋ, ವಿವೋ ಹಾಗೂ ಐಕ್ಯೂ ಫೋನ್ ಗಳು ಸೇರಿವೆ. ಈ ಕಂಪೆನಿಯ ಫೋನ್ಗಳಲ್ಲೂ ಈ ಫೀಚರ್ಸ್ ಸದ್ಯ ಚಾಲ್ತಿಯಲ್ಲಿದೆ. ಸ್ಯಾಮ್ ಸಂಗ್ ನಲ್ಲಿ ಇದನ್ನು ಸೆಂಡ್ ಡಯಾಗ್ನೋಸ್ಟಿಕ್ಸ್ ಡೇಟಾ ಎಂಬ ಹೆಸರಿನಲ್ಲಿ ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ.
ನಿಷ್ಕ್ರಿಯಗೊಳಿಸುವುದು ಹೇಗೆ?:
ನೀವು ಮೊದಲು ನಿಮ್ಮ ಫೋನ್ನ ಸೆಟ್ಟಿಂಗ್ ಗಳಿಗೆ ಹೋಗಬೇಕು.
ಇಲ್ಲಿ ಎನ್ಹಾನ್ಸ್ಡ್ ಇಂಟೆಲಿಜೆಂಟ್ ಸರ್ವಿಸಸ್ ಎಂಬ ಆಯ್ಕೆ ಕಾಣಿಸುತ್ತದೆ. ಇದನ್ನು ಆಫ್ ಮಾಡಿ.
ಬಳಿಕ ನಿಮ್ಮ ಫೋನ್ ಅನ್ನು ರಿ ಸ್ಟಾರ್ಟ್ ಮಾಡಿ ಉಪಯೋಗಿಸಿ.