ಬೆಂಗಳೂರು: ಇಸ್ರೊದ ಮಹತ್ವಾಕಾಂಕ್ಷಿಯೋಜನೆ ಚಂದ್ರಯಾನ –3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವಸೇರಿದೆ. ಲ್ಯಾಂಡರ್ ನಿಂದ ಹೊರಬಂದ ರೋವರ್ ತನ್ನ ಕಾರ್ಯ ಆರಂಭಿಸಿದೆ.
ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೊ ಮಾಹಿತಿ ನೀಡಿತ್ತು.
ಇದೀಗ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಯಾವ ರೀತಿ ಹೊರಗಡೆ ಬಂದಿದೆ ಎನ್ನುವುದರ ವಿಡಿಯೊವನ್ನು ಇಸ್ರೊ ಎಕ್ಸ್ (ಟ್ವಿಟರ್)ಖಾತೆಯಲ್ಲಿ ಹಂಚಿಕೊಂಡಿದೆ.
‘ಚಂದ್ರಯಾನ-3 ರೋವರ್ ಲ್ಯಾಂಡರ್ ನಿಂದ ಚಂದ್ರನ ಮೇಲ್ಮೈನಲ್ಲಿ ಹೊರಬಂದು ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ’ ಎಂದು ವಿಡಿಯೊಗೆ ಕ್ಯಾಪ್ಷನ್ ನೀಡಿದೆ.
Saval TV on YouTube