ಮನೆ ರಾಜ್ಯ ಮುರುಘಾ ಶ್ರೀಗಳ ಪ್ರಯಾಣಕ್ಕೆ ತಡೆಯೊಡ್ಡಿದ ಪೊಲೀಸರು: ಚಿತ್ರದುರ್ಗಕ್ಕೆ ಮರಳಲು ಸೂಚನೆ

ಮುರುಘಾ ಶ್ರೀಗಳ ಪ್ರಯಾಣಕ್ಕೆ ತಡೆಯೊಡ್ಡಿದ ಪೊಲೀಸರು: ಚಿತ್ರದುರ್ಗಕ್ಕೆ ಮರಳಲು ಸೂಚನೆ

0

ಚಿತ್ರದುರ್ಗ(Chitrdurga): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಕಾರನ್ನು ಹಾವೇರಿ ಬಳಿ ಪೊಲೀಸರು ತಡೆದಿದ್ದು,  ಚಿತ್ರದುರ್ಗಕ್ಕೆ ಮರಳುವಂತೆ ಸೂಚನೆ ನೀಡಿದ್ದಾರೆ.

ಮುರುಘಾ ಮಠದಿಂದ ಹೊರನಡೆದು ಅಜ್ಞಾತ ಸ್ಥಳಕ್ಕೆ ತೆರಳಿದ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಅವರನ್ನು ಹಾವೇರಿ ಪೊಲೀಸರು ಬಂಕಾಪುರದ ಬಳಿ ಪತ್ತೆ ಮಾಡಿದ್ದಾರೆ. ಹಾವೇರಿ ಪೊಲೀಸರು ಅವರೊಂದಿಗೆ ಚರ್ಚೆ ನಡೆಸಿ ಚಿತ್ರದುರ್ಗಕ್ಕೆ ಮರಳುವಂತೆ ಮನವೊಲಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಅವರನ್ನು ಕರೆತರಲಾಗುತ್ತದೆ.

ಶ್ರೀಗಳ ಬಂಧನವಾಗಿಲ್ಲ: ವಕೀಲ ಉಮೇಶ್

ಮುರುಘಾ ಶ್ರೀಗಳ ಬಂಧನವಾಗಿಲ್ಲ. ಪೊಲೀಸರೇ ಶ್ರೀಗಳಿಗೆ ಭದ್ರತೆ ನೀಡಿದ್ದಾರೆ. ಮಧ್ಯಾಹ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ವಕೀಲ ಉಮೇಶ್ ತಿಳಿಸಿದ್ದಾರೆ.

ಶರಣರನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು. ವಕೀಲರೊಬ್ಬರನ್ನು ಭೇಟಿಯಾಗಲು ಹಾವೇರಿಗೆ ತೆರಳಿದ್ದರು. ಅವರು ಮಧ್ಯಾಹ್ನದ ಹೊತ್ತಿಗೆ ಮಠಕ್ಕೆ ಮರಳಲಿದ್ದಾರೆ’ ಎಂದು ಮಠದ ಸಲಹಾ ಸಮಿತಿ‌ ಸದಸ್ಯ ಆನಂದಪ್ಪ ನೀಡಿದ್ದಾರೆ.

ಹಿಂದಿನ ಲೇಖನಸಿದ್ದರಾಮಯ್ಯ ಮನೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಭೇಟಿ: ಮಾತುಕತೆ
ಮುಂದಿನ ಲೇಖನಗಂಡ ಹೆಂಡತಿ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕ್ರೌರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್