ಹುಬ್ಬಳ್ಳಿ: ಇಲ್ಲಿನ ಅಶೋಕನಗರದಲ್ಲಿರುವ ಉದ್ಯಮಿ ಗಣೇಶ್ ಸೇಟ್ ಎಂಬುವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಉದ್ಯಮಿ ಗಣೇಶ್ ಸೇಟ್ ಅವರಿಗೆ ಸೇರಿದ ಕಚೇರಿ, ಹೋಟೆಲ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಉದ್ಯಮಿ ಗಣೇಶ್ ಸೇಟ್ ಅವರು ಸ್ಟೇಶನ್ ರಸ್ತೆಯಲ್ಲಿ ಕೆಜಿಪಿ ಜ್ಯುವೆಲ್ಲರಿ, ಜವಳಿ ಉದ್ಯಮ ಮತ್ತು ಹೋಟೆಲ್ ನಡೆಸುತ್ತಿದ್ದಾರೆ. ಅಧಿಕಾರಿಗಳು ಸತತ 10 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಉದ್ಯಮಿ ಗಣೇಶ್ ಸೇಟ್ ಮತ್ತು ಪುತ್ರ ಶ್ರೀಗಂಧ ಸೇಟ್ ಅವರ ವಿಚಾರಣೆ ನಡೆಸಿದ್ದಾರೆ.
Saval TV on YouTube