ಮನೆ ರಾಜ್ಯ ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ: ಬಿ.ವೈ. ರಾಘವೇಂದ್ರ

ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ: ಬಿ.ವೈ. ರಾಘವೇಂದ್ರ

0

ಶಿವಮೊಗ್ಗ: ಜನರ ಅಪೇಕ್ಷೆ, ನಮ್ಮ ತಂದೆಯ ಅಪೇಕ್ಷೆ, ನಮ್ಮ ಕಾರ್ಯಕರ್ತರೆಲ್ಲರ ಅಪೇಕ್ಷೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ನಿಲ್ಲಬೇಕು ಎಂಬುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ವರುಣಾ ಕ್ಷೇತ್ರದಿಂದ ನಿಲ್ಲುವ ಸಾಧ್ಯತೆಯನ್ನು ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ. ವರುಣಾದಲ್ಲಿ ನಿಲ್ಲುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಅಧಿಕೃತವಾಗಿ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ.‌ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ಬಿಜೆಪಿಯಿಂದ ಎಲ್ಲಾ ತಯಾರಿಗಳು ಆಗಿವೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಸಂಘಟನಾ ಶಕ್ತಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಮಾಡಿದಂತಹ ಪ್ರವಾಸಗಳು, ಗೃಹ ಸಚಿವ ಅಮಿತ್ ಶಾ ಸಮಾವೇಶಗಳು ಜನರನ್ನ ಉತ್ತೇಜಿಸಲು ಅನುಕೂಲವಾಗಿವೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿವೆ ಎಂದರು.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಪಕ್ಷ ಬಿಜೆಪಿ ಅಲ್ಲ. ನಮ್ಮ ಕಾರ್ಯಕರ್ತರು ಈಗಾಗಲೇ ಸನ್ನದ್ಧರಾಗಿದ್ದಾರೆ. ಈ ಚುನಾವಣೆಯಲ್ಲಿ ನಮಗೆ ಪರಿಪೂರ್ಣ ಬಹುಮತ ಬರುತ್ತದೆ. ಹಿಂದೆ ನಾಲ್ಕು ಬಾರಿ ಸರ್ಕಾರ ರಚನೆ ಮಾಡಿದಾಗಲೂ ನಮಗೆ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈ ಸಲ ಬಂದೇ ಬರುತ್ತದೆ. 150 ಸೀಟುಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಬೈಂದೂರು ಸೇರಿಸಿಕೊಂಡು ಶಿವಮೊಗ್ಗ ಸಂಸತ್ ವ್ಯಾಪ್ತಿಯಲ್ಲಿ ಏಳು ಬಿಜೆಪಿ ಶಾಸಕರನ್ನ ನಾವು ಕೊಟ್ಟಿದ್ದೇವೆ. ಈ ಈ ಸಲ ಏಳು ಕ್ಷೇತ್ರಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ಭದ್ರಾವತಿಯನ್ನು ಸೇರಿಸಿಕೊಂಡು ಒಟ್ಟು ಎಂಟು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು.

ಈ ಬಾರಿ ಬಿಜೆಪಿಗೆ ಜನ ಮನ್ನಣೆ ಕೊಟ್ಟೇ ಕೊಡುತ್ತಾರೆ. ಎಲ್ಲಾ ಕಡೆ ಅಸಮಾಧಾನ ಇರುವುದು ಸಹಜ. ಅಸಮಾಧಾನ ಎಲ್ಲಿದೆ ಅಲ್ಲಿ ಸರಿ ಮಾಡುವುದು ನಾನು ಮಾಡುತ್ತೇನೆ.

ಹಿಂದಿನ ಲೇಖನಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ..
ಮುಂದಿನ ಲೇಖನ“ಮಾಸ್ ರಾಮಾಚಾರಿ 2.0” ಏಪ್ರಿಲ್ 7 ಕ್ಕೆ ತೆರೆಗೆ