ಮಂಗಳೂರು(Mangallore): ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿ ಇತ್ತು. ಇಲ್ಲಿದ್ದ ದೇವಸ್ಥಾನ ಯಾವುದೋ ವಿವಾದಕ್ಕೆ ನಾಶವಾಗಿತ್ತು ಎಂದು ತಾಂಬೂಲ ಪ್ರಶ್ನೆ ಸಂದರ್ಭದಲ್ಲಿ ಕೇರಳಾದ ಖ್ಯಾತ ಜ್ಯೋತಿಷಿ ಜೆ.ಪಿ. ಗೋಪಾಲಕೃಷ್ಣ ಪಣಿಕರ್ ತಿಳಿಸಿದ್ದಾರೆ.
ಮಳಲಿಯ ಮಸೀದಿ ಸ್ಥಳದಲ್ಲಿ ಹಿಂದೂ ಧಾರ್ಮಿಕ ಸ್ಥಳ ಇತ್ತು. ಈ ಸ್ಥಳದಲ್ಲಿ ಹಿಂದೆ ಗುರುಪೀಠ ಇತ್ತು ಯಾವುದೋ ಒಂದು ಕಾಲದಲ್ಲಿ ದೇವಾಲಯ ಇತ್ತು. ಇದು ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ತಿಳಿದು ಬರುತ್ತಿದೆ ಎಂದು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ವಿವಾದದಿಂದ (ಶೈವ/ವೈಷ್ಣವ ವಿವಾದ) ನಾಶವಾಯಿತು. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ನಾಶವಾದಾಗ ಈ ಸ್ಥಳದಲ್ಲಿ ಇದ್ದವರು ಇಲ್ಲಿಂದ ಹೋಗಿದ್ದಾರೆ. ಇಲ್ಲಿಂದ ಮಠವನ್ನು ಸಹ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಆದರೆ, ಅವರು ಪೂರ್ಣವಾಗಿ ಕೊಂಡು ಹೋಗಿಲ್ಲ. ಅರ್ಧ ಸಾನಿಧ್ಯ ಇಲ್ಲಿಯೇ ಉಳಿದಿದೆ.ಇದೀಗ ಈ ಜಾಗದ ಮಾಲಿಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಈ ಮೂಲಕ ತಾಂಬೂಲ ಪ್ರಶ್ನೆ ಆಧಾರದ ಮೇಲೆ ಮಸೀದಿಯಲ್ಲಿ ಶಿವಸಾನಿಧ್ಯದ ಸುಳಿವು ಪತ್ತೆಯಾಗಿದೆ. ಮಂಗಳೂರಿನ ಮಳಲಿಯ ಜುಮಾ ಮಸೀದಿಯಲ್ಲಿ ದೇವರು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಮಸೀದಿಯ ಕೆಳಗೆ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸಗಳು ಕಂಡುಬಂದಿದ್ದು, ಇದು ವಿವಾದಕ್ಕೆ ಕಾರಣವಾಗಿದ್ದರಿಂದ ತಾಂಬೂಲ ಪ್ರಶ್ನೆ ಕೇಳಲಾಗಿತ್ತು.