ಮನೆ ರಾಜ್ಯ ಸಂವಿಧಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು: ಗೃಹ ಸಚಿವ ಜಿ.ಪರಮೇಶ್ವರ್

ಸಂವಿಧಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು: ಗೃಹ ಸಚಿವ ಜಿ.ಪರಮೇಶ್ವರ್

0

ತುಮಕೂರು: ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು, ಸಂವಿಧಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಇದು ಈ ಸ್ವಾತಂತ್ರ್ಯ ದಿನಾಚರಣೆ ಭಾಗವಾಗಿ ಕಾಣುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿಂದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದೆ.‌ ನೂತನವಾಗಿ ನಿರ್ಮಾಣ ಮಾಡಿರುವ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನೆರವೇರಿದೆ.‌ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸ್ಥಳೀಯರಿಗೆ ಎಚ್.ಎ.ಎಲ್ ನಲ್ಲಿ ಉದ್ಯೋಗ ಆದ್ಯತೆ‌ ನೀಡುವಂತೆ ಸೂಚನೆ ನೀಡಿದ್ದೇನೆ. ನೇಮಕಾತಿ ಪರೀಕ್ಷೆಯಲ್ಲಿ ಹಗರಣ ಸಾಬೀತಾದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದಿತ್ತು. ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯ್ತು. ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ 5 ರಿಂದ 11 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ನಮ್ಮ  ಜಿಲ್ಲೆಯಲ್ಲಿ 35 % ಬಿತ್ತನೆಯಾಗಿದೆ. ಅಂಕಿ-ಅಂಶ ತರಿಸಿಕೊಂಡು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುತ್ತೇವೆ ಎಂದರು.

ಅಂತರಾಷ್ಟ್ರೀಯ ಮಟ್ಟದ‌ ವಿಮಾನ ನಿಲ್ದಾಣ ಮಾಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

 ಚೆನ್ನೈ – ಮುಂಬೈ ಇಂಡ್ರಸ್ಟ್ರೀಯಲ್ ಕಾರಿಡಾರ್ ಗೆ ರೈತರು ಭೂಮಿ ಕಳೆದುಕೊಳ್ಳುವ ವಿಚಾರವಾಗಿ ಮಾತನಾಡಿ, ಅಭಿವೃದ್ಧಿ ಮಾಡೋದು ಒಂದು‌ ಭಾಗ, ರೈತರು ಭೂಮಿ ಕಳೆದುಕೊಳ್ಳುವುದು ಮತ್ತೊಂದು ಭಾಗ. ರೈತರಿಗೆ ಸಮರ್ಪಕವಾದ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕೊಬ್ಬರಿಗೆ ರಾಜ್ಯ ಸರ್ಕಾರ 1250 ಬೆಂಬಲ‌ ಘೋಷಣೆ ಮಾಡಿದ್ದೇವೆ. ಖರೀದಿ ಬೆಲೆ 11 ಸಾವಿರದವರೆಗೂ ಇದೆ. ಹೀಗಾಗಿ ಕೊಬ್ಬರಿ ಬೆಂಬಲ‌ ಬೆಲೆ 13 ಸಾವಿರದವರೆಗೂ ಆಗುತ್ತೆ.‌ ಕೇಂದ್ರ ಸರ್ಕಾರ 3500  ನೀಡಿದ್ರೆ,‌ ರೈತರಿಗೆ ಅನುಕೂಲ ಆಗುತೆ. ಅವರು ಮನಸ್ಸು ಮಾಡಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗಳೂರಿನಲ್ಲಿ ಅವಶ್ಯಕತೆಯಿತ್ತು.‌ ಹೀಗಾಗಿ ಸ್ಥಾಪನೆ ಮಾಡಿದ್ದೇವೆ. ನೈತಿಕ ಪೊಲೀಸ್ ಗಿರಿ ಅಲ್ಲಿ ಹೆಚ್ಚಿತ್ತು. ಈಗ ನೈತಿಕ‌ ಪೊಲೀಸ್ ಗಿರಿ ನಿಯಂತ್ರಣಕ್ಕೆ ಬಂದಿದೆ. ಅಗತ್ಯ ಬಿದ್ದರೆ ವಿಸ್ತರಣೆ ಮಾಡುತ್ತೇವೆ.  ನೈತಿಕ ಪೊಲೀಸ್ ಗಿರಿ ತುಮಕೂರಿನಲ್ಲಿ ಇಲ್ಲ ಎಂದರು.