ನವದೆಹಲಿ (New Delhi)- ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಹಂಗೀರ್ ಪುರಿ (Jahangir Puri) ಗಲಭೆ ಪ್ರಕರಣದಲ್ಲಿ ಶಂಕಿತರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಪ್ರಕರಣ ದಾಖಲಿಸಲಾಗಿದೆ.
ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ ಇನ್ಫಾರ್ಮೇಷನ್ ವರದಿ ಪೊಲೀಸ್ ಎಫ್ಐಆರ್ (Police FIR ) ಗೆ ಸಮನಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ಇನ್ಫಾರ್ಮೇಷನ್ ವರದಿ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸರ್ ಹೆಸರು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನ ಇತ್ತೀಚೆಗೆ ಇದೇ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಶಿಫಾರಸು ಮಾಡಿ ಇಲಾಖೆಗೆ ಪತ್ರ ಬರೆದಿದ್ದರು.
ಏ.16 ರಂದು ಹನುಮಾನ್ ಜಯಂತಿ ಮೆರವಣಿಗೆ ವೇಳೆ ದೆಹಲಿಯ ಜಹಂಗೀರ್ ಪುರಿಯಲ್ಲಿ ಎರಡು ಕೋಮುಗಳ ನಡುವೆ ಗಲಭೆ ಉಂಟಾಗಿತ್ತು. ಘಟನೆಯಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರಿಗೆ ಗಾಯಗಳಾಗಿದ್ದವು.
ಗಲಭೆಯಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು, ವಾಹನಗಳನ್ನು ಸುಡುವುದು ವರದಿಯಾಗಿತ್ತು. ಜಹಂಗೀರ್ ಪುರಿಯ ಬಿ ಬ್ಲಾಕ್ ನಲ್ಲಿರುವ ನಿವಾಸಿ ಅನ್ಸರ್ (35) ಗಲಭೆಯ ಪ್ರಮುಖ ಆರೋಪಿಯಾಗಿದ್ದು ಪಿತೂರಿ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.