ಮನೆ ಮನರಂಜನೆ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ತಮಿಳಿನ ‘ಜೈ ಭೀಮ್’ ಮಲಯಾಳಂನ ಮರಕ್ಕರ್ ಚಲನಚಿತ್ರ ಆಯ್ಕೆ

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ತಮಿಳಿನ ‘ಜೈ ಭೀಮ್’ ಮಲಯಾಳಂನ ಮರಕ್ಕರ್ ಚಲನಚಿತ್ರ ಆಯ್ಕೆ

0

ನವದೆಹಲಿ: ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ 2022 ರ ಆಸ್ಕರ್‌ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ.

ವಿಶ್ವದಾದ್ಯಂತ ಆಯ್ಕೆಯಾಗಿರುವ 276 ಚಿತ್ರಗಳ ಪೈಕಿ ಜೈ ಭೀಮ್ ಮತ್ತು ಮಲಯಾಳಂ ಚಿತ್ರ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ ಭಾರತದಿಂದ ಆಯ್ಕೆಯಾಗಿವೆ. ಅಂತಿಮ ನಾಮನಿರ್ದೇಶನ ಪಟ್ಟಿಯು ಫೆಬ್ರವರಿ 8, 2022 ರಂದು ಪ್ರಕಟವಾಗಲಿದೆ.

ಜೈ ಭೀಮ್


ಇರುಲರ್ ಬುಡಕಟ್ಟಿನ ಜನರಿಗಾಗುವ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ಮಾತನಾಡುವ ಸೂರ್ಯ ಅಭಿನಯದ ಜೈ ಭೀಮ್, 2021 ರ ಅತ್ಯುತ್ತಮ ತಮಿಳು ಚಲನಚಿತ್ರ. ಟಿಜೆ ಜ್ಞಾನವೇಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಜೋಸ್ ಮತ್ತು ಮಣಿಕಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 94ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ತಮಿಳು ಚಲನಚಿತ್ರ ಜೈ ಭೀಮ್.

ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ ಮತ್ತು ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಫೆಬ್ರವರಿ 8, 2022 ರಂದು ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 27, 2022 ರಂದು ಅಮೆರಿಕಾದಲ್ಲಿ ನಿಗದಿಪಡಿಸಲಾಗಿದೆ.

ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ


ಮೋಹನ್ ಲಾಲ್ ಅಭಿನಯದ ಮರಕ್ಕರ್: ಅರಬಿಕದಲಿಂತೆ ಸಿಂಹಂ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರವು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಸಂಗ್ರಹಿಸಿದೆ. ಕ್ಯಾಲಿಕಟ್ ನಲ್ಲಿ 16ನೇ ಶತಮಾನದಲ್ಲಿ ನಡೆಯುವ ಈ ಚಲನಚಿತ್ರವು ಝಮೋರಿನ್ ನೌಕಾಪಡೆಯ ಅಡ್ಮಿರಲ್ ಕುಂಜಾಲಿ ಮರಕ್ಕರ್ ಅವರನ್ನು ಆಧರಿಸಿದೆ. ಕೀರ್ತಿ ಸುರೇಶ್, ಕಲ್ಯಾಣಿ ಪ್ರಿಯದರ್ಶನ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್ ಮತ್ತು ಸಿದ್ದಿಕ್ ಕೂಡ ಅಭಿನಯಿಸಿದ್ದಾರೆ.