ಮನೆ ಮನರಂಜನೆ ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ: ರಾಘವೇಂದ್ರ ರಾಜ್ ಕುಮಾರ್

ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ: ರಾಘವೇಂದ್ರ ರಾಜ್ ಕುಮಾರ್

0

ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪುನೀತ್ ರ ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸಿದ್ದವಾದ ಚಿತ್ರಗಳ ಪೋಸ್ಟರ್ ಅನ್ನು ರಾಘವೇಂದ್ರ ರಾಜ್ ಕುಮಾರ್ ಅಪ್ಲೋಡ್ ಮಾಡಿದ್ದಾರೆ. ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿರುವ ಮೂರು ಚಿತ್ರಗಳ ಮಾಹಿತಿಯನ್ನು ರಾಘವೇಂದ್ರ ರಾಜ್ ಕುಮಾರ್  ಹಂಚಿಕೊಂಡಿದ್ದು, ಈ ಪೈಕಿ ನಟ ಡ್ಯಾನಿಷ್ ಸೇಠ್ ಅಭಿನಯದ, ಒನ್ ಕಟ್, ಟೂ ಕಟ್, ರಂಗಾಯಣ ರಘು ಅಭಿನಯದ ಫ್ಯಾಮಿಲಿ ಪ್ಯಾಕ್, ರಾಮ ರಾಮ ರೇ ಖ್ಯಾತಿಯ ನಟರಾದ ನಟರಾಜ್, ಧರ್ಮಣ್ಣ..ಶ್ರೀಧರ್ ಅಭಿನಯದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಪೋಸ್ಟರ್ ಅನ್ನು  ಹಂಚಿಕೊಂಡಿದ್ದಾರೆ.

ಹಿಂದಿನ ಲೇಖನಈ ವರ್ಷ ‘ಕೊರೋನಾ ಪಾಸ್’ ಇಲ್ಲ: ಸಚಿವ ಬಿ.ಸಿ.ನಾಗೇಶ್
ಮುಂದಿನ ಲೇಖನಆಸ್ಕರ್ ಪ್ರಶಸ್ತಿಗೆ ಭಾರತದಿಂದ ತಮಿಳಿನ ‘ಜೈ ಭೀಮ್’ ಮಲಯಾಳಂನ ಮರಕ್ಕರ್ ಚಲನಚಿತ್ರ ಆಯ್ಕೆ