ಮನೆ ಅಪರಾಧ ಜಮ್ಮು-ಕಾಶ್ಮೀರ: ಎಲ್ಇಟಿ ಉಗ್ರನ ಬಂಧನ

ಜಮ್ಮು-ಕಾಶ್ಮೀರ: ಎಲ್ಇಟಿ ಉಗ್ರನ ಬಂಧನ

0

ಜಮ್ಮು-ಕಾಶ್ಮೀರ(Jammu-Kashmir): ಸೊಪೋರ್​​-ಕುಪ್ವಾರ್​ ರಸ್ತೆಯಲ್ಲಿ ಎಲ್​​ಇಟಿ ಉಗ್ರನನ್ನು ಭಾರತೀಯ ಯೋಧರು ಬಂಧಿಸಿದ್ದಾರೆ.

ಎಲ್​​ಇಟಿಯ ಹೈಬ್ರಿಡ್​ ಉಗ್ರ ಸಾಕಿಬ್​​ ಶಕೀಲ್​ ದಾರ್​ ಬಂಧಿತ ಭಯೋತ್ಪಾದಕನಾಗಿದ್ದು, ಆತನಿಂದ ಪಿಸ್ತೂಲ್, ಮ್ಯಾಗಜೀನ್ ಮತ್ತು 8  ಬುಲೆಟ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ಬಂಧಿತ ಉಗ್ರ ಯೋಜನೆ ರೂಪಿಸುತ್ತಿದ್ದನೆಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ 9:40ರ ಸುಮಾರು ಚೆಕ್​ ಬ್ರಾತ್​​ ರಸ್ತೆ ಬಳಿ ಬರುತ್ತಿದ್ದ ವ್ಯಕ್ತಿಯ ಚಲನವಲನದಲ್ಲಿ ಅನುಮಾನ ಮೂಡಿದ್ದು, ನಿಲ್ಲುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಬಂಧಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಈತ ಕಳೆದ ಕೆಲ ದಿನಗಳಿಂದ ಚೆಕ್​ ಬ್ರಾತ್​​​ನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಜೊತೆ ಸೇರಿ ಕೆಲಸ ಮಾಡ್ತಿದ್ದ. ಈತ ಭಾರತೀಯ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದನು. ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹಿಂದಿನ ಲೇಖನರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾಗಿ ನ್ಯಾ. ಡಿ ವೈ ಚಂದ್ರಚೂಡ್‌ ನಾಮನಿರ್ದೇಶನ
ಮುಂದಿನ ಲೇಖನಮಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲಾಗುತ್ತಿದೆ: ಸಚಿವ ಕೆ.ಗೋಪಾಲಯ್ಯ