ಪಿತ್ತಕೋಶದಲ್ಲಿ ಕಲ್ಲುಗಳು :
ಪಿತ್ತಕೋಶ, ವಿತ್ತರಸದ ನಾಳಗಳ ನೋವು ಸಾಮಾನ್ಯವಾಗಿ ಹೊಟ್ಟೆಯ ಮೇಲ್ಬಾಗದಲ್ಲಿ ಬರುತ್ತದೆ ಬಲಪಕ್ಕೆಲುಬುಗಳ ಕೆಳಗೆ ಇದು ಇರುತ್ತದೆ. ಈ ನೋವು ಕ್ರಮೇಣ ಬಲ ಭುಜದವರೆಗೂ ವ್ಯಾಪಿಸುತ್ತದೆ ನೋವು ಬಂದಾಗ ಹೊಟ್ಟೆಯಲ್ಲಿ ವಿಕಾರವಾಗುತ್ತದೆ. ವಾಂತಿಯಾಗುತ್ತದೆ.
ಈ ಕಲ್ಲುಗಳು ಪಿತ್ತಕೋಶದಲ್ಲಿದ್ದಾಗ. ಈ ನೋವು ಹೆಚ್ಚಿರುವುದಿಲ್ಲ ಅದು ನಾಳಗಳಿಗೆ ಬಂದಾಗ ತೀವ್ರತೆ ಹೆಚ್ಚು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅದರಲ್ಲಿ ಹೆಚ್ಚು ಹೆರಿಗೆಯಾಗಿರುವವರಿಗೆ ಹೆಚ್ಚಾಗಿರುತ್ತದೆ.
ಆಹಾರ ಸೇವಿಸಿದ ಕೂಡಲೇ ಇದು ಬರುತ್ತದೆ. ಸೇವಿಸಿದ ಆಹಾರಕ್ಕೆ ಜೀರ್ಣಾವಸ್ಥೆಗೆ ಪಿತ್ತರಸ ಅಗತ್ಯವಾಗಿ ಬೇಕಾಗುತ್ತದೆ. ಎಷ್ಟು ಹೆಚ್ಚಾಗಿ ಆಹಾರ ಸೇವಿಸಿದರೂ ಅಷ್ಟು ಹೆಚ್ಚಾಗಿ ಪಿತ್ತರಸದ ಅವಶ್ಯಕತೆ ಇರುತ್ತದೆ ವ್ಯಕ್ತಿಯು ಹೆಚ್ಚು ವಿರಾಮದ ನಂತರ ಸೇವಿಸಿದಾಗ ಈ ಲಕ್ಷಣಗಳು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಸಾಮಾನ್ಯವಾಗಿ 1-5 ಅಟೆಗಳವರೆಗೆ ನೋವು ಇರುತ್ತದೆ. ಆಹಾರದ ನಂತರ ಸ್ಥಿರವಾಗಿ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಹೊಟ್ಟೆಯ ಜಠರ, ಪಿತ್ತ ಕೋಶದ ಸುತ್ತಮುತ್ತ ನೋವಿದ್ದರೆ ಪರೀಕ್ಷಿಸುವುದು ಉತ್ತಮ. ಇದಕ್ಕಾಗಿ ಅಲ್ಟಾಸೌಂಡ್ ಪರೀಕ್ಷೆ ಕಡ್ಡಾಯ.
ಪಿತ್ತಕೋಶದ ಕಲ್ಲುಗಳು ಏರ್ಪಡ ವಿರಬೇಕೆಂದರೆ ಮೊದಲು ಹೆಚ್ಚು ಜಿಡ್ಡಿನ ಅಂತ, ಕೊಬ್ಬಿನ, ಮೇದಸ್ಸು ಹೆಚ್ಚಿಗೆ ಇರುವಂತ ಆಹಾರವನ್ನು ಪೂರ್ಣ ವಾಗಿ ಬಿಡಬೇಕು. ಕಲ್ಲುಗಳಿಂದ ನಿರಂತರ ನೋವು ಬರುತ್ತಿದ್ದರೆ ಸರ್ಜರಿಯ ಮೂಲಕ ನಿರ್ಮೂಲನೆ ಮಾಡುವುದು ಕ್ಷೇಮ. ಕೆಲವು ಔಷಧಿಗಳಿಂದ ಕಲ್ಲನ್ನು ಕರಗಿಸಬಹುದು. ಆದರೆ ಸಮಯಾವಕಾಶ ಬೇಕಾಗುತ್ತದೆ. ದೀರ್ಘಕಾಲದ ಮಾತ್ರೆಯಿಂದ ಕೆಲವು ಸಲ ಅಲರ್ಜಿಗಳಾಗುತ್ತದೆ. ಈ ರೀತಿಯ ಕಲ್ಲು ಉತ್ಪತ್ತಿಯನ್ನು ತಡೆಯಲು ನಮ್ಮ ಆಹಾರ ಪದ್ಧತಿ ಮತ್ತು ಆಯುರ್ವೇದದ ಚಿಕಿತ್ಸೆಗಳು ಇವೆ. ಆದರೆ ಅಪಾಯದ ಮಟ್ಟ ಮೀರಿದರೆ ಕಷ್ಟಕರ
ಕಾಮಾಲೆ ಆದಾಗ ರೋಗಿಗಳಿಗೆ ಸಾಕಷ್ಟು ವಿಶ್ರಾಂತಿ ಅವಶ್ಯ. ಆದರೆ ದೈನಂದಿನ ನಿತ್ಯಕರ್ಮಗಳಿಗೆ ಅಡ್ಡಿಯಿಲ್ಲ ಸದಾ ಹಾಸಿಗೆಯಲ್ಲಿಯೇ ಮಲಗಿರಬೇಕಾದ ಅವಶ್ಯಕತೆಯಿಲ್ಲ ಆದರೆ ಕಾಮಾಲೆ ತೀವ್ರವಾದಲ್ಲಿ ಆಸ್ಪತ್ರೆಗೆ ದಾಖಲಾಗಿ ಪೂರ್ಣ ವಿಶ್ರಾಂತಿ ಅವಶ್ಯಕ ನಾವು ಸೇವಿಸುವ ಆಹಾರ ಪೂರ್ಣವಾಗಿ ಜೀರ್ಣ ಆಗುವಂತಿರಬೇಕು. ಆದರಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರಬೇಕು. ಆದ್ದರಿಂದ ಕರಿದ, ಸಿಹಿಯಾದ, ಖಾರದ, ಮಾಂಸದ ಆಹಾರ ಸೇವನೆ ಸೂಕ್ತವಲ್ಲ ಹಣ್ಣು-ತರಕಾರಿ ಸೂಕ್ತ.
ಎಲ್ಲ ವಿಧವಾದ ಯಕೃತ್ ವ್ಯಾಧಿಗಳಿಗೆ ಲಿವರ್ 52 ಡಿ.ಎಸ್’ ಮಾತ್ರೆ ಅಥವಾ ಸಿರಪ್ ಸೂಕ್ತ ಮತ್ತು ಬಿಕಾಂಪ್ಲೆಕ್ಸ್ ಮತ್ತು ವಿಟಾಮಿನ್ ‘ಸಿ’ ಮಾತ್ರೆಗಳು ಸೂಕ್ತವಾಗಿ ಯಕೃತ್ತಿನ ಸಮಸ್ಯೆಯನ್ನು ನಿವಾರಿಸುತ್ತದೆಂದು ಅನುಭವಿ ವೈದ್ಯರ ಅಭಿಪ್ರಾಯ. ಮಕ್ಕಳು ಹಸಿವೆಯಿಲ್ಲದೆ ತೊಂದರೆ ಪಟ್ಟು ಬಲಹೀನ ರಾದರೆ ಅವರಿಗೆ ಯಕೃತ್ತು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸದಿದ್ದಾಗ ಈ ಮಾತ್ರೆ ಅಥವಾ ಸಿರಪ್ ಸೂಕ್ತವಾಗಿರುತ್ತದೆ.
ಪಾಟಿಲಿವರ್ – ಹೊಟ್ಟೆಯಲ್ಲಿ ಈ ಲಿವರ್ ಬಲಭಾಗದಲ್ಲಿರುತ್ತದೆ. ನಾವು ತೆಗೆದುಕೊಳ್ಳುವ ನಿತ್ಯದ ಆಹಾರದಲ್ಲಿ ಪೌಷ್ಠಿಕಾಂಶ, ಸಕ್ಕರೆ, ಕೊಬ್ಬಿನಾಂಶ ಇತರ ಅಂಶಗಳಿಂದ ಕೂಡಿರುತ್ತದೆ. ನಮಗೆ ಹೆಚ್ಚಾದ ಈ ಅಂಶಗಳು ಲಿವರ್ (ಯಕೃತ್) ನಲ್ಲಿ ಶೇಖರವಾಗುತ್ತದೆ. ಅದರಲ್ಲಿ ಸಕ್ಕರೆ ಅಂಶವನ್ನು ಮಾತ್ರ ಶಕ್ತಿಯಾಗಿ ಪರಿವರ್ತಿಸಿ, ಉಳಿದೆಲ್ಲಾ ಕೊಬ್ಬು ಇತರ ಆಹಾರ ಪದಾರ್ಥಗಳು ಈ ಲಿವರ್ ನಲ್ಲಿ ಕೊಬ್ಬಿನ ರೂಪದಲ್ಲಿ ಶೇಖರವಾಗುತ್ತದೆ. ಇದರ ಒತ್ತಡ ಹೆಚ್ಚಿದಂತೆಲ್ಲಾ ಈ ಲಿವರ್ ಕಣಗಳ ಮೇಲೆ ಪ್ರಭಾವ ಬೀರಿ, ಅದರ ಗುಣಗಳನ್ನು ಕಳೆದುಕೊಳ್ಳುತ್ತದೆ. ಅಲ್ಲದೆ, ಈ ಕೊಬ್ಬು ರಾಶಿಯಾಗಿ ಲಿವರ್ ಗಾತ್ರದಲ್ಲಿ ಹೆಚ್ಚಾಗುತ್ತದೆ. ಇದನ್ನು ‘ಪ್ಯಾಟಿಲಿವರ್’ ಎನ್ನುತ್ತಾರೆ.
ಇದರಲ್ಲಿ ಮೂರು ಅಂಗಗಳಿರುತ್ತವೆ. ಮೊದಲ ಅಂಗ ಲಿವರ್ನಲ್ಲಿ ಅಲ್ಪ ಪ್ರಮಾಣದಲ್ಲಿ ಕೊಬ್ಬು ಸೇರುತ್ತದೆ. ಎರಡನೇ ಅಂಗದಲ್ಲಿ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಸೇರಿ, ಲಿವರ್ ಗಾಯಗೊಳ್ಳುತ್ತದೆ. ಅಲ್ಪ ಪ್ರಮಾಣದಲ್ಲಿ ಲಿವರ್ ಕಿಣ್ವಗಳು ನಾಶವಾಗುತ್ತದೆ. ಮೂರನೇ ಅಂಗದಲ್ಲಿ ಲಿವರ್ ನಲ್ಲಿ ಸಿರೋಸಿಸ್ ಉಂಟಾಗಿ, ಲಿವರ್ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಲಿವರ್ ಬದಲಾವಣೆಯ ಹೊರತು, ಅನ್ಯಮಾರ್ಗವಿಲ್ಲದಂತಾಗುತ್ತದೆ.
ಈ ಪ್ಯಾಟಿಲಿವರ್ ಬಂದನಂತರ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಲಿವರ್ ಸಿರೋಸಿಸ್ ಆಥವಾ ಲಿವರ್ ಕ್ಯಾನ್ಸರ್ ಆಗುವ ಸಂಭವ ಮೊದಲ ಹಂತವಿದೆಂದು ಅಲಕ್ಷಿಸಬಾರದು. ಅದು ನೇರವಾಗಿ ಮೂರನೇ ಹಂತಕ್ಕೆ ಹೋಗುವ ಅವಕಾಶವಿದೆ.
ಪರೀಕ್ಷೆಗಳು
* ★ಅಲ್ಟಾಸೌಂಡ್ ಅಟ್ಟಾಮಿನ್ ಸ್ಕ್ಯಾನಿಂಗ್ನಿಂದ ಬಹುಮಟ್ಟಿಗೆ ತಿಳಿಯುತ್ತದೆ.
* ★ಲಿವರ್ ಫಂಕ್ಷನ್ ಪರೀಕ್ಷೆ ಮಾಡಿದಾಗ ಯಾವುದಾದರೂ ಇಂಜೈಮಿನ್ (ಹಾರ್ಮೋನ್) ಸ್ರವಿಸುವುದರಿಂದ ಲಿವರ್ ಡ್ಯಾಮೇಜ್ ವಿಷಯ ತಿಳಿಯುತ್ತದೆ.
* ★ಮಧುಮೇಹ, ಕೊಲೆಸ್ಟ್ರಾಲ್ ಹಂತವನ್ನು ತಿಳಿಯಬೇಕು. ಕ್ಯಾನ್ಸರ್ ತಿಳಿಯಲು ಲಿವರ್ ಬಯಾಪ್ಪಿ *ಅಗತ್ಯವಿರುತ್ತದೆ.
ಎಚ್ಚರಿಕೆಗಳು*
ತೂಕ ಹೆಚ್ಚಿದಂತೆಲ್ಲಾ ಲಿವರ್ ಗೆ ತೊಂದರೆಯಾಗುತ್ತದೆಂದು ★ಅಧ್ಯಯನದಿಂದ ದೃಢಪಟ್ಟಿದೆ.
★* ಸ್ಕೂಲಕಾಯದಲ್ಲಿ ಶೇಕಡ 90% ಮಂದಿಗೆ ಮೊದಲ ಹಂತ, ಶೇಕಡ 20% ರಷ್ಟು ಎರಡನೇ ಹಂತ.
★* ಮಧುಮೇಹದವರಲ್ಲಿ ಶೇಕಡ 50% ರಷ್ಟು ಮಂದಿಯು ಪ್ಯಾಟಿಲಿವರ್ ಹೊಂದಿರುತ್ತಾರೆ.
* ★ಸಿರೋಸಿಸ್ ಬಂದವರಲ್ಲಿ ಶೇಕಡ 95% ರಷ್ಟು ಮಂದಿ ಮಧುಮೇಹ ಸ್ಕೂಲಕಾಯರಾಗಿರುತ್ತಾರೆ.
ಆರೋಗ್ಯಕರವಾದ ಆಹಾರ :
ನಾವು ತೆಗೆದುಕೊಳ್ಳುವ ಆಹಾರದಲ್ಲಿ ತಪ್ಪದೆ ತರಕಾರಿ, ಹಣ್ಣುಗಳನ್ನು ತೆಗೆದುಕೊಳ್ಳಬೇಕು. ತುಪ್ಪದಿಂದ ದೂರವಿರಿ, ಮೀನು, ಆಲೀವ್ ಎಣ್ಣೆಯನ್ನು ಬಳಸಬೇಕು, ಪಾಲಿಶ್ ಮಾಡದ ಅಕ್ಕಿ, ಗೋಧಿ ಹೆಚ್ಚು ಬಳಸಿ.
ವ್ಯಾಯಾಮ
ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ಮಾಡಬೇಕು. ಮೆಟ್ಟಿಲು ಹತ್ತುವುದು, ಮಧುಮೇಹಅಂಕೆಯಲ್ಲಿರಬೇಕು ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕು. ಮದ್ಯಪಾನದಿಂದ ದೂರವಿರಬೇಕು.
ಕಾಮಾಲೆಗೆ ಪರಿಹಾರಗಳು :
ತರಕಾರಿ ಮತ್ತು ಹಣ್ಣುಗಳಿಂದ :
ಲೋಳಸರಾ (ಆಲ್ವೇರಾ) – ಲಿವರ್ (ಯಕೃತ್) ವ್ಯಾಧಿಗಳಿಗೆ ದಿವೌಷಧ, ಪಿತ್ತಜನಕಾಂಗ ಉರಿಯೂತ, ಕಾಮಾಲೆ (ಜಾಂಡೀಸ್) ಪಿತ್ತಕೋಶದಲ್ಲಿ ಉಂಟಾಗುವ ಕಲ್ಲುಗಳು, ಮದ್ಯಪಾನದಿಂದ ಉಂಟಾಗುವ ಸಿರೋಸಿಸ್, ಇತರ ಎಲ್ಲಾ ಯಕೃತ್ ತೊಂದರೆಗಳಿಗೆ ಈ ಲೋಳರಸ ದಿವೌಷಧ. ಅದರ ಎಲೆಗಳನ್ನು ತೆಗೆದುಕೊಂಡು ಸ್ವಚ್ಛ ಮಾಡಿ, ಅದರ ಮೇಲಿನ ಸಿಪ್ಪೆಯನ್ನು ತೆಗೆದು ತಿರುಳನ್ನು ಬೇರ್ಪಡಿಸಿ ಅದರ ತಿರುಳನ್ನು ನೀರಿನಿಂದ ತೊಳೆದು ಸಕ್ಕರೆ ಬೆರೆಸಿ, ದಿನದಲ್ಲಿ ಮೂರುಬಾರಿ ಹಸಿದ ಹೊಟ್ಟೆಯಲ್ಲಿ ಸೇವಿಸಿ ಪತ್ಯ ಮಾಡಿದರೆ ಮೇಲೆ ಹೇಳಿದ ಲಿವರ್ (ಯಕೃತ್) ರೋಗಗಳು ಹೋಗುವುದು. ಹಿರಿಯರ ಅಥವಾ ವೈದ್ಯರ ಸಲಹೆ ಪಡೆದು ಸೇವಿಸಿದರೆ ಉತ್ತಮ.
ಆಯುರ್ವೇದದಲ್ಲಿ – ಸಣ್ಣ ಮಕ್ಕಳ ಯಕೃತ್, ಅಗ್ನಿಮಾಂದ್ಯ ಮುಂತಾದ ತೊಂದರೆಗಳಿಗೆ ಲೋಳಸರಾದಿಂದ ತಯಾರಾದ ಕುಮಾರಿ ಸುವ’ ಎಂಬ ಔಷಥ ರಾಮಬಾಣ.
ತುಂಬೆ ಸೊಪ್ಪು – ಈ ತುಂಬೆ ಕಾಮಾಲೆ ವ್ಯಾಧಿಗೆ ಪರಿಣಾಮಕಾರಿ ಔಷಧಿ ಹಸಿದಾದ
ತುಂಬೆ ಸೊಪ್ಪನ್ನು ಕಿತ್ತು ತಂದು, ನೀರಿನಲ್ಲಿ ಸ್ವಚ್ಛಗೊಳಿಸಿ ಕುಟ್ಟಿ ರಸವನ್ನು ಹಿಂಡಿ ತೆಗೆದು, ರೋಗಿಯ ವಯಸ್ಸು ಮತ್ತು ರೋಗದ ತೀವ್ರತೆಯನ್ನು ತಿಳಿದು 15-30 ಮಿಲಿಲೀಟರ್ ಹಸುವಿನ ಹಾಲು ಅಥವಾ ಜೇನುತುಪ್ಪದಲ್ಲಿ ಬೆರೆಸಿ ಪ್ರತಿದಿನ 2-3 ಸಲ ಊಟಕ್ಕೆ ಮೊದಲು ಕುಡಿಯಲು ಕೊಡಬೇಕು. ಆಗ ಜಿಡ್ಡಿನ ಆಹಾರ ಸೇವನೆಯನ್ನು ಬಿಡಬೇಕು ಮತ್ತು ಜೀರ್ಣಕ್ಕೆ ಕಠಿಣವಾಗುವ ಆಹಾರವನ್ನು ಬಿಟ್ಟು ಸಿಹಿಯಾದ ದ್ರವ ಆಹಾರವನ್ನು ತೆಗೆದುಕೊಂಡು ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಂಡರೆ ಶೀಘ್ರವಾಗಿ ಗುಣಮುಖರಾಗುತ್ತಾರೆ.
ತುಂಬೆ ಹೂವನ್ನು ಎದೆಹಾಲಿನಲ್ಲಿ ಅರೆದು ಅರ್ಧ ರಸವನ್ನು ಕಣ್ಣಿಗೆ ಹಾಕಿದರೆ ಕಾಮಾಲೆ ರೋಗದಿಂದ ಕಣ್ಣಿನಲ್ಲಿ ಬರುವ ಹಳದಿಬಣ್ಣ ಬಹು ಬೇಗ ಕಡಿಮೆಯಾಗುವುದು. ಹಸಿದಾದ ಸೊಪ್ಪನ್ನು ತಂದು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡಿರುವುದು ಉತ್ತಮ, ತಾಜಾ ಸೊಪ್ಪು ದೊರಕದಿದ್ದಾಗ ಈ ಪುಡಿಯನ್ನೇ ಒಂದರಿಂದ ಎರಡು ಚಮಚ ಪ್ರಮಾಣದ ಹಾಲಿನಲ್ಲಿ ಕುದಿಸಿ ಕೊಡಬಹುದು.
★* ಒಂದು ವಾರದವರೆಗೆ ದೊಡ್ಡಪತ್ರೆಯ ಎಲೆಯನ್ನು ತಿಂದರೆ ಅರಶಿಣ ಕಾಮಾಲೆ ವ್ಯಾಧಿ ಗುಣವಾಗುತ್ತದೆ.
★* ಬಾಲಮೆಣಸಿನ ಪುಡಿಯನ್ನು ಮೂಲಂಗಿ ಸೊಪ್ಪಿನ ರಸ ಮತ್ತು ಜೇನುತುಪ್ಪದೊಡನೆ ಸೇವಿಸಿದರೆ ಕಾಮಾಲೆ ಗುಣವಾಗುತ್ತದೆ.
ಮೂಲಂಗಿ – ಮೂಲಂಗಿ ಸಸ್ಯದ ಹಸಿರು ಎಲೆಗಳನ್ನು ಕಾಮಾಲೆ ವ್ಯಾಧಿಗೆ ಉಪಯೋಗಿಸು ತ್ತಾರೆ. ಇದರ ಎಲೆಯನ್ನು ಜಜ್ಜಿ ಅದರ ರಸ ತೆಗೆದು ತೆಳುವಾದ ಬಟ್ಟೆಯಲ್ಲಿ ಸೋಸಿ ಅದರ ರುಚಿಗೆ ತಕ್ಕಂತೆ ಕಲ್ಲುಸಕ್ಕರೆಯನ್ನು ಬೆರೆಸಿ ಪ್ರತಿದಿನ 500 ಮಿಲಿಲೀಟರ್ ರಸವನ್ನು ಸೇವಿಸುತ್ತಾ ಬಂದರೆ ಶೀಘ್ರದಲ್ಲಿಯೇ ಉಪಶಮನವಾಗುತ್ತದೆ.
ನೆಲ್ಲಿಕಾಯಿ- ಇದರ ಎಲೆಯ 30 ಮಿಲಿ ರಿಂದ 60 ಮಿಲಿ ರಸವನ್ನು ಅಂದರೆ 1 ಅಥವಾ 2 ಟೀ ಚಮಚ ರಸವನ್ನು ಜೇನುತುಪ್ಪದ ಜೊತೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡು ಸಾವಿದ್ದು ಶೀಘ್ರದಲ್ಲಿಯೇ ಕಾಮಾಲೆ ರೋಗ ಗುಣವಾಗುತ್ತದೆ.
ಪಿತ್ತಕೋಶದಲ್ಲಿ ಕಲ್ಲು
ಪಿತ್ತಕೋಶದಲ್ಲಿ ಕಲ್ಲು ಉಂಟಾಗಿ ಆದರಿಂದ ಅರಶಿಣ ಕಾಮಾಲೆ ವ್ಯಾಧಿ ಬಂದಿದ್ದರೆ 30 ಮಿಲಿ ನೆಲನೆಲ್ಲಿ ರಸವನ್ನು ಮೇಕೆ ಹಾಲಿನಲ್ಲಿ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂರು ವಾರಗಳ ಕಾಲ ತೆಗೆದುಕೊಂಡು ಪತ್ಯದಿಂದ ಇದ್ದರೆ ಪಿತ್ತಕೋಶದ ಕಲ್ಲು ನಿವಾರಣೆಯಾಗುತ್ತದೆ.
ನೆಲನೆಲ್ಲಿ ಸೊಪ್ಪು ಗರುಗದ ಸೊಪ್ಪು ತೆರೆಹಿಪ್ಪಲಿ ಸೊಪ್ಪು ಮತ್ತು ತುರಬೆಸೊಪ್ಪು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ತಯಾರಿಸಿದ ಕಲ್ಕ (ಕಷಾಯ)ವನ್ನು ದಿನದಲ್ಲಿ ಎರಡು ಸಾರಿ 2 ರಿಂದ 3 ಗ್ರಾಂ ಪ್ರಮಾಣದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತಕೋಶದ ಕಲ್ಲಿನಿಂದ ಉಂಟಾದ ಕಾಮಾಲೆ ವ್ಯಾಧಿಯು ಗುಣವಾಗುವುದು. ಅಲ್ಲದೆ ಲಿವರ್ ಸಿರೋಸಿಸ್, ಯಕೃತ್ ಉರಿ… ಇತರ ಕಡಿಮೆಯಾಗುತ್ತದೆ.
ಮುದ್ರೆಯಿಂದ — ಲಿವರ್ ತೊಂದರೆಗೆ ಪೃಥ್ವಿ ಮುದ್ರೆ, ಶಂಖ ಮುದ್ರೆ/ ಸಹಜ ಶಂಖಮುದ್ದೆ
ಯೋಗದಿಂದ – ಪ್ರಾಣಾಯಾಮ ಪ್ರತಿದಿನ 20 ನಿಮಿಷ ಮಾಡಿ.
ಜ್ಯೋತಿಷ್ಯಶಾಸ್ತ್ರದ ರೀತಿ
ಕಾಮಾಲೆಕಾರಕ ಗ್ರಹ – ಗುರು ಆನಂತರ ರಕ್ತಕಾರಕ ಕುಜ.
ಭಾವಗಳಲ್ಲಿ ಪಂಚಮ.
ರಾಶಿಯಲ್ಲಿ – ತುಲಾ, ಮಕರ ಅನಂತರ ರಕ್ತಕಾರಕ ರಾಶಿ ಸಿ೦ಹ.
ಪಿತ್ತಕಾರಕ ಗ್ರಹಗಳು – ಸೂರ್ಯ ಮತ್ತು ಕುಜ ಇವರೂ ಸಹ ಪೀಡಿತರಾದರೆ ಪಿತ್ತವಿಕಾರ
ಉಂಟಾಗುತ್ತದೆ. ಶನಿಯು :ಅಡೆತಡೆಕಾರಕ ಗ್ರಹ ಜಾತಕದಲ್ಲಿ ಶನಿಯು ಪೀಡಿತನಾದರೆ ಅದರಲ್ಲೂ ಗುರುವಿನಿಂದ ಪೀಡಿತನಾದರೆ ಯಕೃತ್ ನಿಂದ ದೊಡ್ಡ ಸಣ್ಣಕರುಳಿಗೆ ಹೋಗುವ ಮಾರ್ಗದ ನಾಳಗಳಲ್ಲಿ ತಡೆಯಾಗುತ್ತದೆ. ಅಂದರೆ ೬6ಪಿತ್ತರಸದಲ್ಲಿ ರಸಾಯನಿಕ ಕ್ರಿಯೆಗಳಾಗಿ ಕಲ್ಲು ಉತ್ಪತ್ತಿಯಾಗುತ್ತದೆ.
ವೈರಸ್ನಿಂದ ಬರುವ ಯಕೃತ್ ( ಲಿವರ್) ಕಾಮಾಲೆಯು: ವೈರಸ್ ಕಾರಕ* ಗ್ರಹ- ರಾಹು, ⅞ರಕ್ತಕಾರಕ-ಕುಜ. ಇವರು ತುಲಾ ಅಥವಾ ರಕ್ತರಾಶಿ ಸಿಂಹವನ್ನು ಪೀಡಿಸಿದಾಗ ಲಿವರ್ ಕಾಮಾಲೆ ಬರುತ್ತದೆ. ಇಲ್ಲಿ ಆಹಾರ, ನೀರು ಹವಾಮಾನ ಕಲುಷಿತದಿಂದ ಬರುವ ವ್ಯಾಧಿಗೆ ಮೇಷ ರಾಶಿ ಪರಿಶೀಲಿಸಿ. ಇದರಿಂದ ಕಲುಷಿತ †ನೀರು ಅಥವಾ ಆಹಾರದಿಂದ ವೈರಸ್ ಹರಡಿ ಯಕೃತ್ತಿನ ಉರಿಯೂತ ದಿಂದ ಕಾಮಾಲೆ ಉಂಟಾಗುತ್ತದೆ. ಯಕೃತ್ತಿನ ಜೀವಕಣಗಳಿಗೆ ಘಾಸಿಯಾಗಿ, ಅವುಗಳಲ್ಲಿರುವ ಕಿಣ್ವಗಳು (ಪಿತ್ತರಸ) ರಕ್ತಕ್ಕೆ ಸೋರುತ್ತದೆ. ಇದರಿಂದ ರಕ್ತದಲ್ಲಿ ಪೀತವರ್ಣದ ಕಿಣ್ವಗಳು ಹೆಚ್ಚಾಗಿ, ರಕ್ತವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ರಕ್ತ ಈ ಪಿತ್ತವರ್ಣ ಮತ್ತು ವೈರಸ್ ದಿಂದ ಕೆಡಬಾರದು.
ರಕ್ತದಲ್ಲಿ ಕೆಂಪು ರಕ್ತಕಣಗಳ ಕಾರಕ ಸೂರ್ಯ ಪೀಡಿತವಾಗಬಾರದು.














