ಮನೆ ರಾಜಕೀಯ ಜೆಡಿಎಸ್ ಶಕ್ತಿಯನ್ನು ಚುನಾವಣೆಯಲ್ಲಿ ತೋರಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಶಕ್ತಿಯನ್ನು ಚುನಾವಣೆಯಲ್ಲಿ ತೋರಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

0

ಮೈಸೂರು(Mysuru): ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಮತ್ತು ಭಾರತ್ ಜೋಡೊ ಯಾತ್ರೆಯಿಂದ  ನಮಗೆ ಯಾವುದೇ ಎಫೆಕ್ಟ್ ಆಗಲ್ಲ. ಜೆಡಿಎಸ್ ಶಕ್ತಿ ಏನೆಂದು ಈ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ನಗರದ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿಂದು ಮಾಧ್ಯಮಗಳ‌ ಜೊತೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ವಿಚಾರ, ಇದ್ಯಾವುದು ಚುನಾವಣೆಗೆ ಯಾವ ಪಕ್ಷಕ್ಕೂ ಪ್ಲಸ್ ಆಗಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೀಸಲಾತಿ ದೊರಕಿಸಿಕೊಟ್ಟಿದ್ದರು. ಆ ಕಾರಣಕ್ಕಾಗಿ ಎಂಎಲ್ ಎ, ಎಂಪಿಗಳು ಮೀಸಲಾತಿ ಅವಕಾಶ ಪಡೆದುಕೊಂಡರು. ಆ ಕಾರಣಕ್ಕೆ ವಿಧಾನಸಭೆ , ಲೋಕಸಭೆ ಪ್ರವೇಶ ಮಾಡಿದರು. ಆದರೆ  ದೇವೇಗೌಡರನ್ನೇ ನೆನೆಸಿಕೊಳ್ಳುವ ಕೆಲಸ ಆಗಿಲ್ಲ ಎಂದರು.

ಪ್ರತಾಪ್ ಸಿಂಹ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ

ಟಿಪ್ಪು ಎಕ್ಸ್ ಪ್ರೆಸ್ ಗೆ ಒಡೆಯರ್‌ ಹೆಸರು ನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹ ಅವರನ್ನು ಎಂಪಿ ಮಾಡಿರುವುದು ಹೆಸರು ಬದಲಾವಣೆ  ಮಾಡಲು ಅಲ್ಲ. ಇನ್ನೂ ಸಾಕಷ್ಟು ಸಮಸ್ಯೆಗಳು ಜ್ವಲಂತವಾಗಿವೆ. ಅದರ ಬಗ್ಗೆ ಎಂಪಿ‌ ಗಮನ ಹರಿಸಲಿ. ಪ್ರವಾಹ ಪೀಡಿತರಿಗೆ, ಮಳೆ ಹಾನಿ ಸಂತ್ರಸ್ತರ ಬಗ್ಗೆ ಗಮನ ಹರಿಸಲಿ ಎಂದು ಹೇಳಿದರು.

ಗುಬ್ಬಿ ಶಾಸಕ ಶ್ರೀನಿವಾಸ್ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡಿದ ವಿಚಾರ ಕುರಿತು ಮಾತನಾಡಿ, ಅವರು ಯಾರು ನಮ್ಮ ಪಕ್ಷದಲ್ಲಿಯೇ ಇಲ್ಲ. ಎರಡು ವರ್ಷದ ಹಿಂದೆಯೇ ನಮ್ಮ ಪಕ್ಷ ಬಿಟ್ಟಿದ್ದಾರೆ ಎಂದು ತಿಳಿಸಿದರು.