ಮನೆ Uncategorized ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ ಶ್ರೀಕಂಠೇಗೌಡರನ್ನು ಎಳೆದಾಡಿದ ಜೆಡಿಎಸ್‌ ಕಾರ್ಯಕರ್ತರು: ಆಸ್ಪತ್ರೆಗೆ ದಾಖಲು

ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ ಶ್ರೀಕಂಠೇಗೌಡರನ್ನು ಎಳೆದಾಡಿದ ಜೆಡಿಎಸ್‌ ಕಾರ್ಯಕರ್ತರು: ಆಸ್ಪತ್ರೆಗೆ ದಾಖಲು

0

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಕೆ.ಟಿ. ಶ್ರೀಕಂಠೇಗೌಡ ಅವರು ನಗರದ ಆಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್‌ ನ ಕೆಲವು ಕಾರ್ಯಕರ್ತರು ಗದ್ದಲ‌ ಎಬ್ಬಿಸಿದರು.

Join Our Whatsapp Group

ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ  ಶ್ರೀಕಂಠೇಗೌಡರನ್ನು ಎಳೆದಾಡಿದರು. ಇದರಿಂದ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದು ನಾಮಪತ್ರ ಸಲ್ಲಿಸಲು ಆಗಲಿಲ್ಲ.

ಕ್ಷೇತ್ರದಿಂದ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಪಕ್ಷವು ಬಿ ಫಾರಂ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಶ್ರೀಕಂಠೇಗೌಡ ಪಕ್ಷೇತರರಾಗಿ ಸ್ಪರ್ಧಿಸುವ ಆಶಯದೊಂದಿಗೆ ಗುರುವಾರ ಸಭೆ ನಡೆಸಿದ್ದರು. ಈ ವೇಳೆ ಗದ್ದಲ ಏರ್ಪಟ್ಟು ಅವರು ಆಸ್ಪತ್ರೆ ಸೇರಿದರು.

ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿತ್ತು.

ಹಿಂದಿನ ಲೇಖನಸಮನ್ಸ್‌ಗೆ ಉತ್ತರಿಸಿದ ಪಿಎಂಎಲ್ಎ ಆರೋಪಿಗಳನ್ನು ಬಂಧಿಸಲು ಇ ಡಿಗೆ ವಿಶೇಷ ನ್ಯಾಯಾಲಯದ ಅನುಮತಿ ಅಗತ್ಯ: ಸುಪ್ರೀಂ
ಮುಂದಿನ ಲೇಖನಪೊಲೀಸ್‌ ಇಲಾಖೆ ಸತ್ತಿದೆಯೋ, ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ ಆಕ್ರೋಶ