ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಇಂದು ಮಂಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಸಿಎಂ ಆದ ಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದಕರ ಪರವಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ, ಗೃಹ ಸಚಿವರು ವಿಫಲರಾಗಿದ್ದಾರೆ. ಸಿದ್ದರಾಮಯ್ಯ, ಜಿ. ಪರಮೇಶ್ವರ್ ಕೇರಳ ಫೈಲ್ಸ್ ಸಿನಿಮಾ ನೋಡಲಿ. ಉಡುಪಿಯಲ್ಲಿ ನಡೆದಿರೋದು ಕೇರಳ ಫೈಲ್ಸ್ ಸಿನಿಮಾ. ಕಾಂಗ್ರೆಸ್ ಗೆದ್ದಾಗಲೇ ಪಾಕಿಸ್ತಾನ ಪರ ಜಯಘೋಷ ಕೂಗಿದರು. ಆದರೆ ಈವರೆಗೂ ಅವರನ್ನು ಸಿದ್ದರಾಮಯ್ಯ ಜೈಲಿಗೆ ಹಾಕಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಇಲ್ಲಿ ತಾಕತ್ತು ತೋರಿಸಿದೆ. ಎನ್ ಐಎ ಮೂಲಕ ಪಿಎಫ್ ಐ ಹುಟ್ಟಡಗಿಸಿ ನಿಷೇಧ ಮಾಡಲಾಗಿದೆ. ಉಡುಪಿ ಘಟನೆ ಮುಚ್ಚಿ ಹಾಕುವ ಪ್ರಯತ್ನಗಳಾಗಿದೆ. ಮತಾಂತರ ನಿಷೇಧ ಕಾಯ್ದೆ ರದ್ದು ಪಡಿಸುವ ಕೆಲಸ ಆಗುತ್ತಿದೆ. ಪಠ್ಯದಲ್ಲಿ ಸಾವರ್ಕರ್ ಹೆಸರು ತೆಗೆಯಲು ಯತ್ನಿಸುವ ಮೂಲಕ ಕಾಂಗ್ರೆಸ್ ರಾಷ್ಟ್ರ ವಿರೋಧಿ ಆಗಿದೆ ಎಂದು ನಳೀನ್ ಕುಮಾರ್ ಕಟೀಲ್ ಹರಿಹಾಯ್ದರು.