ಮನೆ ಆರೋಗ್ಯ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ

0

ಯಾವುದಾದರೂ ಪುಸ್ತಕ ಓದುವಾಗ ಆಕಸ್ಮಿಕವಾಗಿ ಅದರ ಪಿನ್ನು ನಿಮ್ಮ ಬೆರಳಿಗೆ ಚುಚ್ಚಿ ಗಾಯವಾಗಿ ರಕ್ತ ಬರಬಹುದು, ನೋವಾದಾಗ ನೀವು ತಕ್ಷಣ ಬೆರಳನ್ನು ಬಾಯಲ್ಲಿಟ್ಟುಕೊಳ್ಳುತ್ತೀರಾ ? ಪಿನ್ನು ಚುಚ್ಚಿದ ತಕ್ಷಣ ನಿಮ್ಮ ಶರೀರದಲ್ಲಿ, ಯಾವ ಯಾವ ಮಾರ್ಪಾಡುಗಳಾಗುತ್ತವೆ ಎಂದು ಗೊತ್ತೇ?

Join Our Whatsapp Group

ಪಿನ್ನು ಚುಚ್ಚಿದಾಗ ಅನೇಕ ಸೂಕ್ಷ್ಮ ಜೀವಾಣುಗಳು ನಿಮ್ಮ ಶರೀರದೊಳಗೆ ಪ್ರವೇಶಿಸಲು  ಪ್ರಯತ್ನಿಸುತ್ತವೆ.  ಆ ಕ್ಷಣದಲ್ಲಿ ನಿಮ್ಮ ಶರೀರದಲ್ಲಿರುವ ರೋಗನಿರೋಧಕ ಶಕ್ತಿ ಜಾಗೃತವಾಗಿ ಆ ಜೀವಣಗಳನ್ನು (ಬ್ಯಾಕ್ಟೀರಿಯಾ) ನಾಶಪಡಿಸಲು ಮತ್ತು ಗಾಯಗಳನ್ನು ವಾಸಿ ಮಾಡುವ ಪ್ರಯತ್ನದಲ್ಲಿ ತೊಡಗುತ್ತದೆ. ಈ ಹೋರಾಟದಲ್ಲಿ ರೋಗದ ಜೀವಾಣುಗಳು ನಾಶವಾಗಬಹುದು ಅಥವಾ ಶರೀರದ ರೋಗನಿರೋಧಕ ಜೀವಕೋಶಗಳೇ ನಾಶವಾಗಬಹುದು.

 ಹೃದಯ, ಶ್ವಾಸಕೋಶಗಳಂತೆ ರೋಗನಿರೋಧಕ ವ್ಯವಸ್ಥೆ ಕೂಡ  ನಮ್ಮ ಶರೀರದ ಒಂದು ಭಾಗ. ಈ ವ್ಯವಸ್ಥೆ ನಮ್ಮ ಶರೀರದಲ್ಲೆಲ್ಲ ವ್ಯಾಪಿಸಿಕೊಂಡಿರುತ್ತದೆ.  ಹೊರಗಿನಿಂದ ದಾಳಿ ಮಾಡುವ ಕೋಟಿಗಟ್ಟಲೆ ಸೂಕ್ಷ್ಮ ಜೀವಾಣುಗಳೊಂದಿಗೆ (ಬ್ಯಾಕ್ಟೀರಿಯಾ) ಹೋರಾಡಿ ನಮ್ಮ ಶರೀರವನ್ನು ಕಾಪಾಡುತ್ತದೆ.

 ನಮ್ಮಲ್ಲಿರುವ ರೋಗನಿರೋಧಕ ವ್ಯವಸ್ಥೆ ಶಾರೀರಿಕ್ಕೆ ಸಂಬಂಧಿಸಿದ ಕಣಗಳಾವುವು, ಅಪಾಯಕಾರಿ ಕಣಗಳಾವುವು ಎಂಬುದನ್ನು ಗುರುತಿಸಬಲ್ಲದು. ಶರೀರದಲ್ಲಿ ಅಪಾಯಕಾರಿ ರೋಗಾಣುಗಳು (ಬ್ಯಾಕ್ಟೀರಿಯಾ) ಪ್ರವೇಶಿಸಿದಾಗ ರೋಗನಿರೋಧಕ ವ್ಯವಸ್ಥೆ, ತಕ್ಷಣ ಪ್ರತಿಕ್ರಿಯಿಸಿ ಅವುಗಳ ಮೇಲೆ ದಾಳಿ ನಡೆಸುತ್ತದೆ. ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು (Antibodies) ಸೃಷ್ಟಿಸಿ ಬ್ಯಾಕ್ಟೀರಿಯದೊಂದಿಗೆ ಹೋರಾಡಬಹುದು. ಇಲ್ಲವೆ  ಬ್ಯಾಕ್ಟೀರಿಯದೊಂದಿಗೆ ನೇರವಾಗಿ ಹೋರಾಡುವ ಕಣಜಾಲವನ್ನು ಉದ್ರೇಕಿಸಿ, ರೋಗಾಣುಗಳನ್ನು ನಾಶ ಮಾಡಲು ಪ್ರಯತ್ನಿಸಬಹುದು.

ನಮ್ಮ ಶರೀರದಲ್ಲಿ ರೋಗನಿರೋಧಕ ವ್ಯವಸ್ಥೆಯು ಈ ಕೆಳಗಿನ ಆವಯವಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

 1. ಥೈಮಸ್ ಗ್ರಂಥಿ (Thymus gland)

2. ಮೂಳೆಗಳಲ್ಲಿರುವ ಮಜ್ಜೆ (Bone Marrow)

3. ಲಿಂಫ್  ಗ್ರಂಥಿಗಳು (Lymph Nodes)

4. ಲಿಂಫ್ ನಾಳಗಳು ( Lymphatic vessels)

5. ಪ್ಲೀಹ (Spleen)

 1. ಥೈಮಸ್ ಗ್ರಂಥಿ (Thymus gland): 

ಎದೆಯ ಮೇಲ್ಭಾಗ ಇರುವ ಗ್ರಂಥಿ ಉತ್ಪತ್ತಿ ಮಾಡುವ ಬಿಳಿ ರಕ್ತ ಕಣಗಳುT-Lymphacytes  ಆಗಿ ರೂಪಾಂತರ ಹೊಂದಿ ಶರೀರವನ್ನು ಸೇರುವ ವೈರಸ್ ಗಳೊಂದಿಗೆ ಹೋರಾಡುತ್ತವೆ.

T-Cells  ಎಂದು ಕರೆಯಲ್ಪಡುವ ಈ ಕಣಗಳು ಇನ್ನೂ ಕೆಲವು ಕಣಗಳೊಂದಿಗೆ ಜೊತೆಯಾಗಿ ವೈರಸ್ ಗಳೊಡನೆ ಹೋರಾಡಲು ಸಿದ್ಧವಾಗುತ್ತವೆ.

T-Cells ನೊಂದಿಗೆ ಜೊತೆಗೂಡುವ ಇತರ ಕಣಗಳು:-

ಅ.  ಸಹಾಯಕ ಟಿ-ಸೆಲ್ಸ್ (Helper T-cells or Co-operator cells)

ಈ ಕಣಗಳು B-Lymphacyte  ಎನ್ನುವ ಮತ್ತೊಂದು ವಿಧವಾದ  ಕಣಗಳಲ್ಲಿ   ಆ್ಯಂಟಿಬಾಡೀಸ್ ಉಂಟಾಗಲು ಸಹಾಯ ಮಾಡುತ್ತವೆ. ವಿಪರ್ಯಾಸವೆಂದರೆ, ಏಡ್ಸ್ ರೋಗದಲ್ಲಿ ಏಡ್ಸ್ ವೈರೆಸ್ ಈ ಹೆಲ್ಪರ್ ಟೀ-ಸೆಲ್ಸ್ಗಳನ್ನೇ ನಾಶ ಮಾಡಿ ಮನುಷ್ಯನನ್ನು ಸಾವಿಗೀಡು ಮಾಡುತ್ತವೆ.

ಆ. ಕಿಲ್ಲರ್ ಟಿ-ಸೆಲ್ಸ್(Killer T-Cells or Cytotoxic cells)

 ನಮ್ಮ ಶರೀರಕ್ಕೆ ಸಂಬಂಧಿಸಿದ ಹೊರ ಸೂಕ್ಷ್ಮಾಣುಗಳು ದೇಹದೊಳಗೆ ಪ್ರವೇಶಿಸಿದಾಗ ಶೀಘ್ರದಲ್ಲೇ ವೃದ್ಧಿಯಾಗಿ ಅವುಗಳನ್ನು ನಾಶ ಮಾಡಲು ಯತ್ನಿಸುತ್ತವೆ. ಗಡ್ಡೆ (Tumour)ಗಳನ್ನು ಸೋಂಕುಗಳನ್ನು ನಾಶಮಾಡುವುದು ಈ ಕಿಲ್ಲರ್ ಟೀ-ಸೇಲ್ ಗಳೇ!

ಇ.  ಸಪ್ರೆಸರ್ ಟಿ-ಸಲ್ಸ್  (Supressor T- Cells)

 ನಮ್ಮ ಶರೀರದೊಳಗೆ ಪ್ರವೇಶಿಸಿದ ಶತ್ರುಗಳು (ಇನ್ಫೆಕ್ಷನ್) ನಾಶವಾದ ಕೂಡಲೇ ಇನ್ನೂ ಹೋರಾಟ ನಿಲ್ಲಿಸಬಹುದೆಂಬ ಯುದ್ಧ ವಿರಾಮದ ಕಹಳೆಯನ್ನು ಈ ಕಣಗಳು ಮುಳುಗಿಸುತ್ತವೆ.

ಸಪ್ರೆಸರ್ ಟಿ-ಸಲ್ಸ್ ಗಳು (Supressor T- Cells)  ಬಲಹೀನಗುಂಡರೆ ಅಥವಾ ಕಾರ್ಯನಿರ್ವಹಿಸದಿದ್ದರೆ,  ರೋಗನಿರೋಧಕ ವ್ಯವಸ್ಥೆಯಲ್ಲಿರುವ ಬೇರೆ ಕಣಗಳು ಹೋರಾಟ ನಿಲ್ಲಿಸುವುದಿಲ್ಲ ಅಂತಹ ಸಂದರ್ಭದಲ್ಲಿ ಸೋಂಕು ಜೀವಾಣು ಎಂಬ ಶತ್ರು ಇಲ್ಲದಿದ್ದರೂ ಅವು ನಮ್ಮ ಶರೀರ ಕಣಜಲದ ಮೇಲೆ ಹೋರಾಡುತ್ತ ಕಡೆಗೆ ರ್ಯೂಮ್ಯಾಟೈಡ್  ಆರ್ಥರೈಟಿಸ್(Rheumatiod Arthritis)  ನಂತಹ ಕೀಲು ನೋವಿಗೆ ಕಾರಣವಾಗುತ್ತದೆ.

2.  ಮೂಳೆಗಳಲ್ಲಿರುವ ಮಜ್ಜೆ(Bone Marrow)

 ನಮ್ಮ ಮೂಳೆಗಳಲ್ಲಿರುವ ಮಚ್ಚೆ ಎಂಬ ಪದಾರ್ಥ ಬಿಳಿ ರಕ್ತ ಕಣಗಳನ್ನು ಉತ್ಪತ್ತಿ ಮಾಡುತ್ತವೆ. ಈ ಬಿಳಿ ರಕ್ತ ಕಣಗಳು ಶರೀರದಲ್ಲಿರುವ ರೋಗಾಣುಗಳೊಂದಿಗೆ ಹೋರಾಡುತ್ತವೆ.

3. ಲಿಂಫ್ ಗ್ರಂಥಿಗಳು (Lymph Nodes)

ಲಿಂಫ್ ಗ್ರಂಥಿಗಳು ಬಿ -ಲಿಂಫೋಸೈಟ್ಸ್(B-Lymphocytes) ಎನ್ನುವ ಬಿಳಿ ರಕ್ತ ಕಣಗಳನ್ನು ತಯಾರು ಮಾಡುತ್ತವೆ ಈ ಬಿ-ಸೆಲ್ ಗಳ ಮೇಲೆ ಶತ್ರುವನ್ನು ಶೂಟ್ ಮಾಡುತ್ತಿರುವ ಕಿಲ್ಲರ್ ಟಿ-ಕಣ(Killer T-cell) ಇಮ್ಯೂನೋ ಗ್ಲೋಬ್ಯುಲಿನ್  ಎನ್ನುವ ಒಂದು ಪ್ರೋಟೀನ್ ಹೊಡಿಕೆ ಇರುತ್ತದೆ ಇದು ಸೋಂಕಿನೊಂದಿಗೆ ಹೋರಾಡುವ ಆ್ಯಂಟಿಬಾಡೀಸ್ ಅನ್ನು ಉತ್ಪತ್ತಿ ಮಾಡುತ್ತದೆ.

4. ಲಿಂಫ್ ನಾಳಗಳು (Lymphatic Vessels)

 ಈ ನಾಳಗಳು ನಮ್ಮ ಶರೀರದಲ್ಲಿ ಸೋಂಕಿಗೀಡಾದ ಭಾಗದಿಂದ ಸೂಕ್ಷ್ಮಜೀವಿಗಳನ್ನು ಲಿಮ್ಸ್ ಗ್ರಂಥಿಗಳೆಡೆಗೆ ಒಯ್ಯುತ್ತವೆ. ಲಿಂಫ್ ಗ್ರಂಥಿಗಳು ಸಿದ್ಧಪಡಿಸುವ ಆ್ಯಂಟಿಬಾಡೀಸ್ ಈ ಸೂಕ್ಷ್ಮಜೀವಿಗಳ ಮೇಲೆ ದಾಳಿ ಮಾಡಿ ಅವನ್ನು ನಾಶಪಡಿಸುತ್ತವೆ.

5. ಪ್ಲೀಹ (ಗುಲ್ಮ) Spleen

 ರಕ್ತಕ್ಕೆ ಬರುವ ಸೂಕ್ಷ್ಮಾಣುಗಳು ಬಿಳಿ ರಕ್ತ ಕಣಗಳಿಂದ ಸುತ್ತುವರೆಯಲ್ಪಟ್ಟು ನಾಶಮವಾಗುತ್ತವೆ.

ರಕ್ತನಾಳಗಳು

ರಕ್ತನಾಳಗಳ ಮೂಲಕ ಬಿಳಿಯ ರಕ್ತ ಕಣಗಳು (ಆ್ಯಂಟಿಬಾಡೀಸ್) ಶರೀರದಲೆಲ್ಲಾ ಚಲಿಸಿ, ಹಾನಿಕಾರಕ ಬ್ಯಾಕ್ಟೀರಿಯಗಳಿಂದ ಶರೀರವನ್ನು ರಕ್ಷಿಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

 ರೋಗನಿರೋಧಕ ವ್ಯವಸ್ಥೆಯಲ್ಲಿ ಎರಡು ವಿಧಗಳಿವೆ.

1. Innate Immunity.

2. Adaptive Immunity.

Innate Immunity  ಎಲ್ಲಿ ಚರ್ಮವು ಪ್ರಮುಖ ಪಾತ್ರ ವಹಿಸುತ್ತದೆ. ಬಾಯಿ, ಗಂಟಲು, ಕಣ್ಣುಗಳು, ಮೂಗಿನ ಹೊಳ್ಳೆಗಳು, ಯೋನಿ, ಮೂತ್ರನಾಳಗಳಲ್ಲಿ ಉತ್ಪತ್ತಿಯಾಗುವ ಕಿಣ್ವಗಳು ಬಹಳ ಮುಖ್ಯವಾದವು.

 ಇವೆಲ್ಲವೂ ನಮ್ಮ ಶರೀರದಲ್ಲಿ ಪ್ರವೇಶಿಸುವ ಸೂಕ್ಷ್ಮಾಣುಗಳನ್ನು ನಾಶಮಾಡುತ್ತವೆ. ಗರ್ಭಸ್ಥ ಶಿಶುವು ತಾಯಿಯ ಶರೀರದಿಂದ ದೊರಕುವ ಆ್ಯಂಟಿಬಾಡೀಸ್ ನಿಂದ ರಕ್ಷಣೆ ಪಡೆದರೆ, ಹುಟ್ಟಿದ ನಂತರ ತಾಯಿಯ ಸ್ತನ್ಯಪಾನದಲ್ಲಿರುವ ಆ್ಯಂಟಿಬಾಡೀಸ್ ನಿಂದ ರಕ್ಷಣೆ ಪಡೆಯುತ್ತದೆ.

 ಮನುಷ್ಯ ಬೆಳೆದು ದೊಡ್ಡವನಾದಾಗ ಹಲವಾರು ರೀತಿಯಲ್ಲಿ ಬ್ಯಾಕ್ಟೀರಿಯದ ದಾಳಿಗೆ ಗುರಿಯಾಗಿ ತಂತಾನೆ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಇದನ್ನು Adaptive Immunity ಎನ್ನುತ್ತೇವೆ ಅಂದರೆ ನಮ್ಮ ಶರೀರವನ್ನು ಪ್ರವೇಶಿಸುವ ಸೂಕ್ಷ್ಮ ಜೀವಾಣುಗಳನ್ನು ನಮ್ಮ ಶರೀರವೇ ಉತ್ಪಾದಿಸಿದ ಆ್ಯಂಟಿಬಾಡಿಗಳು ನಾಶಪಡಿಸುವ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತವೆ.

 ಬಿಳಿ ರಕ್ತ ಕಣಗಳು, ಒಂದು ಸಾರಿ ಶರೀರವನ್ನು ಪ್ರವೇಶಿಸಿದ ಬ್ಯಾಕ್ಟೀರಿಯವನ್ನು ಗುರುತಿಸಿ ಮತ್ತೆ ಅಂತಹ ಜೀವಾಣುಗಳು ಪ್ರವೇಶಿಸದಂತೆ ಎಚ್ಚರಿಕೆವಹಿಸಿ ಆ್ಯಂಟಿಬಾಡಿ ಗಳನ್ನು ತಯಾರಿಸುತ್ತವೆ.

 ಈ ಕ್ರಿಯೆಯನ್ನು ಅರಿತ ನಮ್ಮ ವಿಜ್ಞಾನಿಗಳು ಈ ವಿಧಾನ ಅನುಸರಿಸಿ, ಕೃತಕಲಸಿಕೆಗಳನ್ನು ತಯಾರಿಸಿ , ಅದರ ಸಹಾಯದಿಂದ ಪೋಲಿಯೋ ದಂತಹ ಮಾರಕ ರೋಗಗಳಿಗೆ ಲಸಿಕೆ ನೀಡುವುದರ ಮೂಲಕ ಅನೇಕ ಕಾಯಿಲೆಗಳನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಂಕನ್ನು (ಇನ್ಫೆಕ್ಷನ್) ನಿರೋಧಿಸುವ ಕೆಲವು ಕ್ರಿಯೆಗಳು:

ಲಾಲಾರಸ: ಬಾಯಿಯಲ್ಲಿ ಸ್ರವಿಸುವುದೇ ಲಾಲಾರಸ ಈ ಲಾಲಾರಸದಲ್ಲಿರುವ ಕಿಣ್ವಗಳು ಬಾಯಿಯ ಮೂಲಕ ಪ್ರವೇಶಿಸುವ ಸೂಕ್ಷ್ಮಾಣುಗಳನ್ನು ನಾಶಪಡಿಸುತ್ತದೆ.

ಕಣ್ಣೀರು: ಕಣ್ಣು ಸ್ರವಿಸುವ ಈ ದ್ರವವು, ಕಣ್ಣೀರಿನ ಮೂಲಕ ಪ್ರವೇಶಿಸುವ ಬ್ಯಾಕ್ಟೀರಿಯವನ್ನು ಕಣ್ಣೀರಿನ ಮೂಲಕ ಹೊರ ಹಾಕುತ್ತದೆ. ಅಳಿದುಳಿದ ಸೂಕ್ಷ್ಮಾಣುಗಳನ್ನು ಕೇಂದ್ವಾ ನಾಶಪಡಿಸುತ್ತದೆ.

ಮೂಗು: ಹೊಗೆ,  ಧೂಳು ಹಾಗೂ ಮೂಗಿನ ಮೂಲಕ ಒಳ ಪ್ರವೇಶಿಸುವ ಸೂಕ್ಷ್ಮಾಣುಗಳನ್ನು ಮೂಗಿನ ಹೊಳ್ಳೆಗಳಲ್ಲಿರುವ ಸೂಕ್ಷ್ಮ ರೋಮಗಳು ತಡೆಯುತ್ತವೆ ಹಾಗೂ ಅತಿಕ್ರಮಿಸಿದರೆ ಮತ್ತು ಮುಂದುವರೆದು ಬ್ಯಾಕ್ಟೀರಿಯಾಗಳು ಶ್ವಾಸನಾಳದಿಂದ ಮುಂದೆ ಹೋದಾಗ, ಕೆಮ್ಮಿನ ಮೂಲಕ ಹೊರದೂಡಲ್ಪಡುತ್ತವೆ.

ಕರುಳು: ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆ್ಯಸಿಡ್, ಜಠರಕ್ಕೆ ಪ್ರವೇಶಿಸುವ ಸೂಕ್ಷ್ಮಾಣುಗಳನ್ನು ಕರುಳನ್ನು ಪ್ರವೇಶಿಸಿದ ಹಾನಿಕಾರಕ ಬ್ಯಾಕ್ಟೀರಿಯವನ್ನು ನಮ್ಮ ಉಪಕಾರಿ ಆ್ಯಂಟಿಬಾಡಿಗಳು ನಾಶಪಡಿಸುತ್ತವೆ.

ಮೂತ್ರನಾಳಗಳು: ಮೂತ್ರನಾಳದಲ್ಲಿರುವ ಉಪಕಾರಿ ಬ್ಯಾಕ್ಟೀರಿಯಾಗಳು ಹಾನಿಕಾರಕ ಬ್ಯಾಕ್ಟೀರಿಯಗಳ ಮೇಲೆ ದಾಳಿ ಮಾಡುವುದರ ಮೂಲಕ ನಾಶಪಡಿಸುತ್ತವೆ. ಸ್ತ್ರೀಯರ ಯೋನಿಯಲ್ಲಿರುವ ಶ್ಲೇಷ್ಮಪೊರೆ(Mucus Lining) ಕೂಡ ಇದೇ ಕಾರ್ಯವನ್ನು ಮಾಡುತ್ತದೆ.

ಚರ್ಮ : ಚರ್ಮ ಗ್ರಂಥಿಗಳಲ್ಲಿ ಬೆವರಿನ ಗ್ರಂಥಿಗಳಿರುತ್ತವೆ. ಈ ಸ್ವೇದಗ್ರಂಥಿಗಳಲ್ಲಿ ಉತ್ಪತ್ತಿಯಾದ ಎಣ್ಣೆಯ ಅಂಶ ಮತ್ತು ಬೆವರು, ಚರ್ಮದ ಮೂಲಕ ಪ್ರವೇಶಿಸುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ.

ಈ ವಿಧವಾಗಿ ನಮ್ಮ ಶರೀರದ ಪ್ರತಿಯೊಂದು ಭಾಗವು ಹೊರಗಿನಿಂದ ದಾಳಿ ಮಾಡುವ ಈ ಉಪದ್ರವ ಜೀವಣಗಳನ್ನು ನಾಶ ಮಾಡುವ ಮೂಲಕ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ನಮ್ಮ ಆರೋಗ್ಯ ರಕ್ಷಿಸುತ್ತದೆ.

ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಸೂತ್ರಗಳು:

 ನಮ್ಮ ಶರೀರದ ರೋಗನಿರೋಧಕ ಶಕ್ತಿ ವೃದ್ಧಿಸಲು ಕೆಳಕಂಡ ಸೂತ್ರಗಳನ್ನು ಅನುಸರಿಸಿ

1. ವಿಟಮಿನ್ ಗಳು ಖನಿಜಗಳು ಯಥೇಚ್ಛವಾಗಿರುವಂತಹ ಸಮತೂಕ ಆಹಾರ ಸೇವಿಸಬೇಕು.

2.  ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಅತಿ ವ್ಯಾಯಾಮ ಒಳ್ಳೆಯದಲ್ಲ.

3. ಮಾನಸಿಕವಾಗಿ, ಶಾರೀರಿಕವಾಗಿ ಬಲಹೀನಗೊಳಿಸುವ ಒತ್ತಡದಿಂದ ದೂರವಿರಬೇಕು.

4. ಸಿಗರೇಟು, ಬಿಡಿ, ಗಾಂಜಾ ಇತ್ಯಾದಿಗಳ ಜೊತೆಗೆ ಮಧ್ಯಪಾನ ದಂತಹ ದುಶ್ಚಟಗಳಿಂದ ದೂರವಿರಬೇಕು.

ಮುಂದುವರೆಯುತ್ತದೆ …

ಹಿಂದಿನ ಲೇಖನಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ
ಮುಂದಿನ ಲೇಖನಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ: ನಳೀನ್ ಕುಮಾರ್ ಕಟೀಲ್