ಮನೆ ಉದ್ಯೋಗ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ: ಕನ್ನಡ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನ

ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ: ಕನ್ನಡ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನ

0

ಮೈಸೂರು(Mysuru): ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರವು ಕನ್ನಡ ಭಾಷೆಯನ್ನು ಕಲಿಸಲು ತಾತ್ಕಾಲಿಕವಾಗಿ ಬೋಧನೆಗೋಸ್ಕರ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕನ್ನಡ ಭಾಷೆ ಅಥವಾ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಅಥವಾ ಭಾಷಾ ಶಾಸ್ತ್ರದಲ್ಲಿ ಎಂಎ ಯುಜಿಸಿ ನೆಟ್  ಅರ್ಹತೆ ಹೊಂದಿರಬೇಕು. ಅಥವಾ ಕಾಲೇಜುಗಳು/ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕ್ಕಾಗಿ ಸಂಬಂಧಿಸಿದ ಸಮಾನವಾದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಹೈಯರ್ ಸೆಕೆಂಡರಿ ಅಥವಾ ಅದಕ್ಕಿಂತ ಮೇಲ್ಪಟ್ಟವರೆಗೆ ಸಂಬಂಧಪಟ್ಟ ಭಾಷೆಯನ್ನು ಅಧ್ಯಯನ ಮಾಡಿದ ಸಾಬೀತಾದ/ಪರಿಶೀಲಿಸಬಹುದಾದ ಶೈಕ್ಷಣಿಕ ಅರ್ಹತೆಯೊಂದಿಗೆ ಅಥವಾ ಸಂಬಂಧಪಟ್ಟ ಭಾಷೆ/ಸಾಹಿತ್ಯ ಅಥವಾ ಭಾಷಾಶಾಸ್ತ್ರದಲ್ಲಿ ಪಿಎಚ್‌ಡಿ ಹೊಂದಿರಬೇಕಿದೆ.

ಗರಿಷ್ಠ 39 ಸಾವಿರ ವೇತನ ನಿಗದಿಪಡಿಸಲಾಗಿದೆ, ಅರ್ಜಿ ಸಲ್ಲಿಸಲು ಜು.26 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ  ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಮಾನಸ ಗಂಗೋತ್ರಿ, ಮೈಸೂರು,ಕರ್ನಾಟಕ, 570006 ದೂ. ಸಂಖ್ಯೆ: 8212345000 ನ್ನು ಸಂಪರ್ಕಿಸಬಹುದು.

ಕನಿಷ್ಠ 2 ಭಾಷೆಗಳಲ್ಲಿ ಜ್ಞಾನ ಇರಬೇಕು
ಕನಿಷ್ಠ ಎರಡು ಭಾರತೀಯ ಭಾಷೆಗಳಲ್ಲಿ ಪ್ರದರ್ಶಿಸಬಹುದಾದ ಜ್ಞಾನ ಮತ್ತು ಕೌಶಲ್ಯಗಳನ್ನು ಅಭ್ಯರ್ಥಿಗಳು ಹೊಂದಿರಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಸುವ, ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಇರುತ್ತದೆ. 

ಕನಿಷ್ಠ ಎರಡು ಸೆಮಿಸ್ಟರ್‌ಗಳು/ಒಂದು ವರ್ಷಕ್ಕೆ ಸಂಬಂಧಿಸಿದ ಭಾರತೀಯ ಭಾಷೆಯನ್ನು ಡಿಪ್ಲೊಮಾ/ಅಂಡರ್ ಗ್ರಾಜುಯೇಟ್/ಸ್ನಾತಕೋತ್ತರ ಮಟ್ಟದಲ್ಲಿ ಕಲಿಸುವ ಅನುಭ ಪಡೆದಿರಬೇಕು.

ಹಿಂದಿನ ಲೇಖನವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌: ಫೈನಲ್ಸ್‌ ಗೆ ತಲುಪಿದ ನೀರಜ್‌ ಚೋಪ್ರಾ
ಮುಂದಿನ ಲೇಖನಸತ್ಯಕ್ಕೆ ಜಯ ಸಿಕ್ಕಿದೆ: ಮೈಸೂರಿನಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ