ಬೆಂಗಳೂರು: ಹೆಚ್ಚು ದೇವರ ಭಕ್ತಿ ಹೊಂದಿರುವವರು ಕಾಂಗ್ರೆಸ್ ನವರು. ನಾವು ನಿಜವಾದ ಹಿಂದೂಗಳು. ಬಿಜೆಪಿಯವರು ನಕಲಿ ಹಿಂದೂಗಳು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ದೇವಾಲಯಗಳಿಗೆ ಹೆಚ್ಚಿನ ಸಹಾಯ ಮಾಡಿದ್ದು ಕಾಂಗ್ರೆಸ್. ನನ್ನ ಹೇಳಿಕೆಗೂ ಶಿವಮೊಗ್ಗ ಗಲಾಟೆಗೂ ಸಂಬಂಧವಿಲ್ಲ ಎಂದರು.
ಚುನಾವಣೆ, ರಾಜಕೀಯಕ್ಕೆ ಬಿಜೆಪಿ ಹಿಂದುತ್ವ ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ 4 ವರ್ಷ ಅಧಿಕಾರದಲ್ಲಿತ್ತು. ಆಗ 7 ಸಾವಿರ ರೌಡಿಗಳ ಹೆಸರು ಕೈಬಿಟ್ಟಿದ್ದರು. ರೌಡಿಗಳನ್ನೆಲ್ಲಾ ಬಿಜೆಪಿಗೆ ಸೇರಿಸಿಕೊಂಡಿದ್ದರು . 278 ಕೋಮುಗಲಭೆ ಕೇಸ್ ವಾಪಸ್ ಪಡೆದಿದ್ದಾರೆ. ಬಿಜೆಪಿ ಕಾಲದಲ್ಲಿ ಪೊಲೀಸ್ ನೈತಿಕಗಿರಿ ಇತ್ತು . ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
Saval TV on YouTube