ಮನೆ ರಾಜ್ಯ ಸಚಿವರ ಹೇಳಿಕೆಯಿಂದ ಸಾಹಿತಿಗಳ ಅಂತಃಕರಣಕ್ಕೆ ನೋವು: ಹಂಪ ನಾಗರಾಜಯ್ಯ

ಸಚಿವರ ಹೇಳಿಕೆಯಿಂದ ಸಾಹಿತಿಗಳ ಅಂತಃಕರಣಕ್ಕೆ ನೋವು: ಹಂಪ ನಾಗರಾಜಯ್ಯ

0

ಬೆಂಗಳೂರು (Bengaluru): ಸಚಿವರ ಹೇಳಿಕೆ ಸಾಹಿತಿಗಳ ಅಂತಃಕರಣಕ್ಕೆ ನೋವು ಉಂಟು ಮಾಡಿದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷವೊಂದರ ಕೃಪಾಪೋಷಣೆಯಿಂದ ಸಾಹಿತಿಗಳು, ಪ್ರತಿಷ್ಠಾನಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆಂದು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರವೇ ನಮ್ಮನ್ನು ನಾಮಕರಣ ಮಾಡಿತ್ತು. ಸಚಿವರ ಹೇಳಿಕೆಯಿಂದ ಸಾಹಿತ್ಯ ಲೋಕಕ್ಕೆ ನೋವು, ಹಿಂಸೆಯಾಗಿದೆ. ಅಂಥ ಸಚಿವರಿಗೆ ಮುಖ್ಯಮಂತ್ರಿ ಬುದ್ಧಿ ಹೇಳಲಿ ಎಂದು ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಹೇಳಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಮನೆಯ ಮೇಲೆ ದಾಳಿ ನಡೆದಿರುವುದೂ ಖಂಡನೀಯ. ಭಿನ್ನಾಭಿಪ್ರಾಯ ಬಂದರೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಮನೆ ಹಾಗೂ ವ್ಯಕ್ತಿಗಳ ಮೇಲೆ ದಾಳಿ ನಡೆಸಬಾರದು ಎಂದು ಅಭಿಪ್ರಾಯಪಟ್ಟರು.

ಹಿಂದಿನ ಲೇಖನಜೂನ್‌ 15ರ ನಂತರ ಸಚಿವ ಸಂಪುಟ ಪುನಾರಚನೆ
ಮುಂದಿನ ಲೇಖನದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ನಿವಾಸದ ಮೇಲೆ ಇಡಿ ದಾಳಿ