ಮನೆ ಮನರಂಜನೆ ಜೂ. 21ಕ್ಕೆ ‘ಚಿಲ್ಲಿ ಚಿಕನ್‌’ ಚಿತ್ರ ಬಿಡುಗಡೆ

ಜೂ. 21ಕ್ಕೆ ‘ಚಿಲ್ಲಿ ಚಿಕನ್‌’ ಚಿತ್ರ ಬಿಡುಗಡೆ

0

ಹೋಟೆಲ್‌ ಕೆಲಸ ಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್‌ ಪ್ರಜೋಶ್‌ ಅವರು ನಿರ್ದೇಶಿಸಿರುವ ಚಿತ್ರ ಚಿಲ್ಲಿ ಚಿಕನ್‌ ಜೂ.21ಕ್ಕೆ ಬಿಡುಗಡೆಯಾಗುತ್ತಿದೆ.

Join Our Whatsapp Group

ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್‌ ರೆಸ್ಟೋರೆಂಟ್‌ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬ ಒನ್‌ ಲೈನ್‌ ಕಥೆ ಇಟ್ಟುಕೊಂಡು “ಚಿಲ್ಲಿ ಚಿಕನ್‌’ ಸಿನಿಮಾ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟಕ ಆಧಾರಿತ ಸಿನಿಮಾ ಎಂಬುದು ವಿಶೇಷ.

ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ ಸುಂದರ್‌ ಅವರಿಗೆ ಈ ಕಾನ್ಸೆಪ್ಟ್ ಹೊಳೆಯಿತಂತೆ. ಅದನ್ನು ನಿರ್ದೇಶಕ ಪ್ರತೀಕ್‌ ಪ್ರಜೋಶ್‌ ಅವರಿಗೆ ಹೇಳುತ್ತಾರೆ.

ಅವರು ಆ ಒಂದು ಲೈನ್‌ ಕಥೆಯ ಮೇಲೆ ಸಾಕಷ್ಟು ವರ್ಕ್‌ ಮಾಡಿ ಈಗ ಸಿನಿಮಾ ಮಾಡಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ. ನಿರ್ದೇಶಕ ಪ್ರತೀಕ್‌ ಪ್ರಜೋಶ್‌ ಮಾತನಾಡಿ, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ರಿಲೀಸ್‌ ಆಗಲಿದೆ’ ಎಂದರು. ಈ ಚಿತ್ರದ ನಾಯಕನಾಗಿ ಬಿ.ವಿ. ಶೃಂಗಾ ಅಭಿನಯಿಸಿದ್ದಾರೆ.