ಮನೆ ಅಪರಾಧ ಯಲ್ಲಾಪುರ: ನಿಯಂತ್ರಣ ತಪ್ಪಿ ಕಾರು ಪಲ್ಟಿ- ಪ್ರಯಾಣಿಕರು ಪಾರು

ಯಲ್ಲಾಪುರ: ನಿಯಂತ್ರಣ ತಪ್ಪಿ ಕಾರು ಪಲ್ಟಿ- ಪ್ರಯಾಣಿಕರು ಪಾರು

0

ಯಲ್ಲಾಪುರ: ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಶಿರಸಿ ರಾಜ್ಯ ಹೆದ್ದಾರಿ ಬೇಡ್ತಿ ಗಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ನಡೆದಿದೆ.

Join Our Whatsapp Group

ಶಿರಸಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕಾರಿಗೆ ಎದುರುಗಡೆಯಿಂದ ಲಾರಿಯೊಂದು ಸರಿದಾರಿ ಕೊಡದೇ ಕಾರು ನಿಯಂತ್ರಣ ತಪ್ಪಿ ಗಟಾರಕ್ಕುರುಳಿದೆ ಎನ್ನಲಾಗಿದೆ.

ಲಾರಿ ಪರಾರಿಯಾಗಿದ್ದು, ಕಾರಿನಲ್ಲಿ ಇಬ್ಬರಿದ್ದರು ಎಂದು ತಿಳಿದು ಬಂದಿದೆ.

ಕಾರು ‌ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದವರು ಅಚ್ಚರಿ ರೀತಿಯಲ್ಲಿ ಪಾರಾಗಿ ಕಾರಿನಿಂದ ಹೊರಬಂದಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.

ಕಾರಿನ ಮುಂಭಾಗ ಜಖಂಗೊಂಡಿದೆ.