ಹೈದರಾಬಾದ್ (Hyderabad): ಜೂನಿಯರ್ ಎನ್ ಟಿಆರ್ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಇಂದು ರಾತ್ರಿ 7.30ಕ್ಕೆ ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ಈ ಭೇಟಿ ನಡೆಯಲಿದೆ.
ಇದು ಆಂಧ್ರ- ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಮಿತ್ ಶಾ ಅವರು ಎನ್ಟಿಆರ್ಗೆ ನೀಡಿದ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರು ಒಟ್ಟಿಗೆ ಊಟ ಮಾಡಲಿದ್ದು, ಸುಮಾರು 15 ನಿಮಿಷಗಳ ಕಾಲ ಈ ಮಾತುಕತೆ ನಡೆಯಲಿದೆ. ಆದರೆ ಈ ಮೀಟಿಂಗ್ನ ಉದ್ದೇಶ ಏನೂ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮಾಹಿತಿಗಳು ಕೇಳಿಬಂದಿವೆ. ಎನ್ಟಿಆರ್ ಏನಾದರೂ ಮುಂದಿನ ಚುನಾವಣೆ ಹೊತ್ತಿಗೆ ರಾಜಕೀಯ ಅಂಗಳಕ್ಕೆ ಎಂಟ್ರಿ ನೀಡಲಿದ್ದಾರಾ ಎಂಬ ಚರ್ಚೆಯೂ ಕೂಡ ಕೇಳಿಬಂದಿದೆ. ಎನ್ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ ಕೂಡ ಶಾಸಕರಾಗಿ, ಸಚಿವರಾಗಿ, ರಾಜ್ಯ ಸಭಾ ಸದಸ್ಯರಾಗಿ ಕೆಲಸ ಮಾಡಿದ್ದರು.
ಜೂನಿಯರ್ ಎನ್ಟಿಆರ್ ಅವರ ಕುಟುಂಬ ಸಿನಿಮಾರಂಗದಲ್ಲಿ ಎಷ್ಟು ಫೇಮಸ್ಸೋ ರಾಜಕೀಯವಾಗಿಯೂ ಅಷ್ಟೇ ಹಿಡಿತವನ್ನು ಹೊಂದಿದೆ. ಜೂ. ಎನ್ಟಿಆರ್ ಅವರ ತಾತ ಸೀನಿಯರ್ ಎನ್ಟಿಆರ್ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದವರು. ಟಿಡಿಪಿ ಪಕ್ಷ ಸ್ಥಾಪಿಸಿದ್ದರು. ಆ ಪಕ್ಷವು ಈವರೆಗೂ ಐದು ಬಾರಿ ಆಂಧ್ರ ಪ್ರದೇಶದಲ್ಲಿ ಅಧಿಕಾರ ಪಡೆದುಕೊಂಡಿದೆ. ಆದರೆ ಜೂ. ಎನ್ಟಿಆರ್ ಮಾತ್ರ ಟಿಡಿಪಿ ಪಕ್ಷದಲ್ಲಿ ಸಕ್ರಿಯವಾಗಿಲ್ಲ.