ಕಲಬುರಗಿ: ಸೂಕ್ತ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 7.25 ಲಕ್ಷ ಹಣವನ್ನು ಆಳಂದ ತಾಲ್ಲೂಕಿನ ಹಿರೋಳಿ ಚೆಕ್ ಪೋಸ್ಟ್ ಬಳಿ ಚುನಾವಣಾ ಜಾಗೃತ ದಳದ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ವಾಗ್ದರ್ಗಿ ಕಡೆಯಿಂದ ಜಿಲ್ಲೆಗೆ ಬರುತ್ತಿದ್ದ ಕಾರನ್ನು ತಡೆದ ಬಸವರಾಜ ದೊಡಮನಿ ನೇತೃತ್ವದ ತಪಾಸಣಾಧಿಕಾರಿಗಳ ತಂಡವು ಕಾರನ್ನು ತಪಾಸಣೆ ಮಾಡಿದಾಗ ಹಿಂಬದಿಯ ಪ್ಲಾಸ್ಟಿಕ್ ಚೀಲದಲ್ಲಿ 500, 200 ಮುಖಬೆಲೆಯ ಹಣ 7.25 ಲಕ್ಷ ಹಣ ಸಿಕ್ಕಿತು. ಈ ಬಗ್ಗೆ ಕಾರಿನ ಚಾಲಕ ಯಾದಗಿರಿ ಜಿಲ್ಲೆ ಕಂಚಗಾರಹಳ್ಳಿ ತಾಂಡಾದ ಸಾಗರ ಧರ್ಮ ರಾಠೋಡ ಎಂಬಾತನಿಗೆ ಕೇಳಿದಾಗ ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














