ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 60 ಪಿಯೋನ್, ಪ್ರೊಸೆಸ್ ಸರ್ವರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 25, 2023 ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್’ಲೈನ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಹುದ್ದೆಯ ಮಾಹಿತಿ:
ಸ್ಟೆನೋಗ್ರಾಫರ್ (ಗ್ರೇಡ್ III)- 8
ಟೈಪಿಸ್ಟ್- 9
ಟೈಪಿಸ್ಟ್- ಕಾಪಿಯಿಸ್ಟ್- 1
ಪಿಯೋನ್- 29
ಪ್ರೊಸೆಸ್ ಸರ್ವರ್- 13
ವಿದ್ಯಾರ್ಹತೆ:
ಸ್ಟೆನೋಗ್ರಾಫರ್ (ಗ್ರೇಡ್ III)- ಪಿಯುಸಿ, ಡಿಪ್ಲೊಮಾ
ಟೈಪಿಸ್ಟ್- ಪಿಯುಸಿ, ಡಿಪ್ಲೊಮಾ
ಟೈಪಿಸ್ಟ್- ಕಾಪಿಯಿಸ್ಟ್- ಪಿಯುಸಿ, ಡಿಪ್ಲೊಮಾ
ಪಿಯೋನ್- ಎಸ್’ಎಸ್’ಎಲ್’ಸಿ
ಪ್ರೊಸೆಸ್ ಸರ್ವರ್- ಎಸ್’ಎಸ್’ಎಲ್’ಸಿ
ವಯೋಮಿತಿ:
ಕಲಬುರಗಿ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 25, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ
ವೇತನ:
ಸ್ಟೆನೋಗ್ರಾಫರ್ (ಗ್ರೇಡ್ III)- ಮಾಸಿಕ ₹ 27,650-52,650
ಟೈಪಿಸ್ಟ್- ಮಾಸಿಕ ₹ 21,400-42,000
ಟೈಪಿಸ್ಟ್- ಕಾಪಿಯಿಸ್ಟ್- ಮಾಸಿಕ ₹ 21,400-42,000
ಪಿಯೋನ್- ಮಾಸಿಕ ₹ 17,000- 28,950
ಪ್ರೊಸೆಸ್ ಸರ್ವರ್- ಮಾಸಿಕ ₹ 19,950- 37,900
ಅರ್ಜಿ ಶುಲ್ಕ:
SC/ST/ಪ್ರವರ್ಗ-1/ PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಆನ್ಲೈನ್/ ಚಲನ್
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಟೈಪಿಂಗ್ ಟೆಸ್ಟ್
ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/02/2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮಾರ್ಚ್ 27, 2023
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ districts.ecourts.gov.inಗೆ ಭೇಟಿ ನೀಡಿ.