ಮನೆ ಅಪರಾಧ ಕಲಬುರಗಿ: ನಗದು ಸೇರಿ ₹9.63 ಲಕ್ಷ ಮೌಲ್ಯದ ಒಡವೆ ಕಳವು

ಕಲಬುರಗಿ: ನಗದು ಸೇರಿ ₹9.63 ಲಕ್ಷ ಮೌಲ್ಯದ ಒಡವೆ ಕಳವು

0
ಸಾಂದರ್ಭಿಕ ಚಿತ್ರ

ಕಲಬುರಗಿ: ರಾಜರಾಜೇಶ್ವರಿ ನಗರದ ರೇವಣಸಿದ್ದ ಜಂಪಾ ಅವರ ಮನೆಯ ಬಾಗಿಲಿನ ಕೊಂಡಿ ಮುರಿದ ದುಷ್ಕರ್ಮಿಗಳು ನಗದು ಸೇರಿ ₹9.63 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.

Join Our Whatsapp Group

ರೇವಣಸಿದ್ದ ಅವರು ಮೇ 28ರಂದು ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರ ಸಮೇತ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಜೂನ್ 2ರ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲಿನ ಕೊಂಡಿ ಮುರಿದ ಕಳ್ಳರು ಒಳ ನುಗ್ಗಿದರು.

ಮನೆಯ ಅಲಮಾರಿಯಲ್ಲಿ ಇರಿಸಿದ್ದ ₹2.50 ಲಕ್ಷ ನಗದು ಸೇರಿ ₹9.63 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.