ಮನೆ ಅಪರಾಧ ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ: ಮೂವರಿಗೆ ಗಾಯ

ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ: ಮೂವರಿಗೆ ಗಾಯ

0

ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ಗುರುವಾರ ರಾತ್ರಿ ಕಾಡಾನೆ ದಾಳಿ ನಡೆಸಿದೆ.

Join Our Whatsapp Group

ಮುನಿಯಪ್ಪ, ನಾಗರಾಜು, ಜಡೇಸ್ವಾಮಿ ಆನೆ ದಾಳಿಗೆ ಒಳಗಾದವರು.

ರಾತ್ರಿ ಸಮಯದಲ್ಲಿ ಗಸ್ತಿಗೆ ಹೋಗಿದ್ದಾಗ ಗುಂಡಿಮಾಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಆನೆ ಗ್ರಾಮಕ್ಕೆ ನುಗ್ಗುತ್ತಿರುವುದನ್ನು ಕಂಡು ತಡೆಯಲು ಮುಂದಾಗಿದ್ದಾರೆ. ಈ ಸಂದರ್ಭ ಆನೆ ಮೂವರ ಮೇಲೆ ದಾಳಿ ಮಾಡಿದೆ.

ಮುನಿಯಪ್ಪ ಅವರ ತಲೆ ಹಾಗೂ ನಡುಭಾಗಕ್ಕೆ ಗಂಭೀರ ಪೆಟ್ಟಾಗಿದೆ. ತಲೆಗೆ ಹೊಲಿಗೆ ಹಾಕಲಾಗಿದೆ. ನಾಗರಾಜು ಅವರ ಎಡಗೈಗೆ ಗಾಯವಾಗಿದೆ. ಜಡೇಸ್ವಾಮಿ ಅವರ ಕಾಲಿಗೆ  ಗಾಯಾಳುಗಳಿಗೆ ಹತ್ತಿರದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಚಾಮರಾಜನಗರ  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಕ್ಕೆ ಅಪಾಯವಿಲ್ಲ ಎಂದು ವಲಯ ಅರಣ್ಯಾಧಿಕಾರಿ ಶಿವರಾಮು ತಿಳಿಸಿದರು.