ಮನೆ ಅಪರಾಧ ಕಲಬುರಗಿ ಪಿಎಫ್’ಐ ಜಿಲ್ಲಾ ಘಟಕದ ಅಧ್ಯಕ್ಷನ ಬಂಧನ: 14 ಲಕ್ಷ ವಶ

ಕಲಬುರಗಿ ಪಿಎಫ್’ಐ ಜಿಲ್ಲಾ ಘಟಕದ ಅಧ್ಯಕ್ಷನ ಬಂಧನ: 14 ಲಕ್ಷ ವಶ

0

ಕಲಬುರಗಿ(Bengaluru):  ಪಿಎಫ್’ಐ ಜಿಲ್ಲಾ ಘಟಕದ ಅಧ್ಯಕ್ಷ ಏಜಾಜ್ ಅಲಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದು, ಮನೆಯಲ್ಲಿದ್ದ 14 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಟಿಪ್ಪು ಸುಲ್ತಾನ್ ನಗರದಲ್ಲಿ ಗುರುವಾರ ಬೆಳಿಗ್ಗೆ ಪಿಎಫ್’ಐನ ಏಜಾಜ್ ಅಲಿ ಮತ್ತು ರಾಜ್ಯ ಘಟಕದ ಖಜಾಂಚಿ ಶಾಹೀದ್ ನಾಸಿರ್ ಮನೆ ಮತ್ತು ಕಚೇರಿ ಮೇಲೆ ನಸುಕಿನ ಜಾವ ದಾಳಿ ನಡೆಸಿದರು. ಈ ವೇಳೆ ಶಾಹೀದ್ ನಾಸಿರ್ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ.

ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನ ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರ ಮತ್ತು ಎನ್ಐಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.