ಮನೆ ಕಾನೂನು ಲಖಿಂಪುರ ಖೇರಿ ಹಿಂಸಾಚಾರ:  ಕೇಂದ್ರ ಸಚಿವರ ಮಗನಿಗೆ ಜಾಮೀನು

ಲಖಿಂಪುರ ಖೇರಿ ಹಿಂಸಾಚಾರ:  ಕೇಂದ್ರ ಸಚಿವರ ಮಗನಿಗೆ ಜಾಮೀನು

0

ಅಲಹಾಬಾದ್ : ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ ಖೇರಿಯ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾಗೆ  ಅಲಹಾಬಾದ್ ಹೈ ಕೋರ್ಟ್ ​ ಜಾಮೀನು ಮಂಜೂರು ಮಾಡಿದೆ.

ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಇದೇ ದಿನ ಸಚಿವರ ಪುತ್ರ ನ್ಯಾಯಾಲಯದಿಂದ ಹೊರ ಬಂದಿದ್ದಾರೆ. ಏಳು ಹಂತದ ರಾಜ್ಯ ಚುನಾವಣೆಯಲ್ಲಿ ಲಂಖೀಪುರ ಖೇರಿ ನಾಲ್ಕನೇ ಹಂತದ ಮತದಾನ ಎದುರಿಸಲಿದೆ.

ಜನವರಿ 18 ರಂದು ಅಲಹಾಬಾದ್ ಹೈಕೋರ್ಟ್ ಮಿಶ್ರಾ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ಮುಕ್ತಾಯಗೊಳಿಸಿದ ನಂತರ ನ್ಯಾಯಾಲಯದ ಲಕ್ನೋ ಪೀಠವು ಮಿಶ್ರಾ ಅವರ ಮನವಿಯ ಮೇಲೆ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಮಿಶ್ರಾ ಪರ ವಾದ ಮಂಡಿಸಿದ ವಕೀಲರು ತಮ್ಮ ಕಕ್ಷಿದಾರ ನಿರಪರಾಧಿಯಾಗಿದ್ದು, ರೈತರನ್ನು ಹತ್ತಿಕ್ಕಲು ವಾಹನ ಚಾಲಕನನ್ನು ಪ್ರಚೋದಿಸಿದ್ದರು ಎಂಬುದಕ್ಕೆ ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮನವಿಯನ್ನು ವಿರೋಧಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕೆ ಶಾಹಿ, ಘಟನೆಯ ಸಮಯದಲ್ಲಿ ಮಿಶ್ರಾ ಕಾರಿನಲ್ಲಿದ್ದರು, ಈ ವೇಳೆ ರೈತರ ಹತ್ಯೆ ನಡೆದಿದೆ ಎಂದರು

ಘಟನೆ ವಿವರ: ಅಕ್ಟೋಬರ್ 3 ರಂದು, ಕೇಂದ್ರದ ಕೃಷಿ ಕಾನೂನು ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶೀಶ್​ ಮಿಶ್ರಾ ಕಾರು ಹರಿಸಿದ್ದರು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಘಟನೆಗೆ ಖಂಡಿಸಿದವು. ಇದಾದ ಕೆಲವು ದಿನಗಳ ಬಳಿಕ ಪೊಲೀಸರು ಅಜಯ್​ ಮಿಶ್ರಾನನ್ನು ಬಂಧಿಸಿದ್ದರು. ಘಟನೆಯಲ್ಲಿ ಆಶೀಶ್​​ ಮಿಶ್ರಾ ಅವರು ಕುಳಿತಿದ್ದ ಎಸ್​​ಯುವಿ ಕಾರು ರೈತರ ಮೇಲೆ ಹರಿದ ವಿಡಿಯೋ ವೈರಲ್​ ಆಗಿತ್ತು. ಈ ಘಟನೆ ಸಂಬಂಧ ಈ ಹಿಂದೆ ನ್ಯಾಯಾಲಯ ಅಶಿಶ್​ ಮಿಶ್ರಾಗೆ ಜಾಮೀನು ನೀಡಲು ನಿರಾಕರಿಸಿತು.

ಹಿಂದಿನ ಲೇಖನಹಿಜಬ್​- ಕೇಸರಿ ಶಾಲು ವಿವಾದ: ತ್ರಿಸದಸ್ಯ ಪೀಠದಿಂದ ಪ್ರಕರಣ ವಿಚಾರಣೆ ಆರಂಭ
ಮುಂದಿನ ಲೇಖನರಾಜ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ