“ಹೈದ್ರಾಬಾದ್ ಕರ್ನಾಟಕ” ದಿನಪತ್ರಿಕೆ ಅರ್ಪಿಸಿ”ಶೋ ಫಂಡ ಎಂಟರ್ಟೈನ್ಮೆಂಟ್ “ಸಂಸ್ಥೆ ನಿರ್ಮಾಣದ ” ನಿರ್ಗಮನದ ಹಾದಿಯಲ್ಲಿ ” ಎಂಬ 1948,ಸೆಪ್ಟೆಂಬರ್ 17ರ ಹೈದ್ರಾಬಾದ್ ಕರ್ನಾಟಕ ( ಕಲ್ಯಾಣ ಕರ್ನಾಟಕ ) ವಿಮೋಚನಾ ಕಥಾ ಹಂದರದ ಕನ್ನಡ ಚಲನಚಿತ್ರ ವು ಕಲ್ಯಾಣ ಕರ್ನಾಟಕ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಅದ್ದೂರಿ ಕಾರ್ಯಕ್ರಮಗಳ ನಡುವೆ ಬಿಡುಗಡೆ ಆಗಲಿದೆ.
ಭಾರತ ದೇಶವು ಹಲವು ಚಳುವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿತು. ಈ ಸಂದರ್ಭದಲ್ಲಿ ಹೋರಾಟಗಳು ನಡೆದು 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆಯಿತು.
ಬ್ರಿಟಿಷರ ಅಧೀನದಲ್ಲಿದ್ದ ಭಾರತದ ಸಂಸ್ಥಾನಗಳಲ್ಲಿಯೇ ದೊಡ್ಡ ಸಂಸ್ಥಾನವಾಗಿದ್ದ ಹೈದ್ರಾಬಾದ ನಿಜಾಮನು ತನ್ನ ಸಂಸ್ಥಾನವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಲು ಒಪ್ಪಲಿಲ್ಲ. ಹೀಗಾಗಿ ಈ ಭಾಗದಲ್ಲಿ ಸ್ವಾತಂತ್ರ್ಯದ ಉತ್ಸವವನ್ನು ಆಚರಿಸುವಂತಿದ್ದಿಲ್ಲ. ಆಚರಿಸಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಕಳುಹಿಸಲಾಗುತ್ತಿತ್ತು. ಇಲ್ಲವೇ ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು.
ಇದನ್ನು ಸವಾಲಾಗಿ ಸ್ವೀಕರಿಸಿದ ಈ ಭಾಗದ ಹಿರಿಯರು, ದೇಶಪ್ರೇಮಿಗಳು, ಚಳುವಳಿಯ ಹೋರಾಟಗಾರರು ಹಿಡಿ ಹೈದರಾಬಾದ್ ಪ್ರದೇಶದ ಬೀದರ್, ಗುಲ್ಬರ್ಗ, ರಾಯಚೂರು (ಸೂಚನೆ : ಗುಲ್ಬರ್ಗ ಕಲಬುರ್ಗಿ ಆಗಿದೆ,) ಉಳಿದ ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ- ಇತ್ತೀಚಿನ ಜಿಲ್ಲೆಗಳು) ಗಳಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸಿದರು. ಇದಕ್ಕಾಗಿ ಗಡಿ ಭಾಗಗಳಲ್ಲಿ ಗಡಿ ಶಿಬಿರಗಳನ್ನು ತೆರೆಯಲಾಯಿತು. ಅನೇಕರು ಹೋರಾಟದ ವಿವಿಧ ನೇತೃತ್ವ ವಹಿಸಿಕೊಂಡರು. ಗುಪ್ತವಾಗಿ ನಿಜಾಮರ ವಿರುದ್ಧ ಮತ್ತು ರಜಾಕಾರರ ವಿರುದ್ಧ ಸಮರ ಸಾರಿದರು. ಸಾವು, ನೋವು, ತ್ಯಾಗ ಬಲಿದಾನ, ದೌರ್ಜನ್ಯಗಳು ಜರುಗಿದವು. ಹೈದರಾಬಾದ್ ಕರ್ನಾಟಕ ಪ್ರದೇಶ ಕೆಂಪು ಚರಿತ್ರೆಗೆ ಸಾಕ್ಷಿಯಾಗಿ ನಿಂತಿತು. ಕೊನೆಗೂ ಹೋರಾಟಗಾರರ ಕೆಚ್ಚೆದೆಯ ನಿಲುವು, ನಿರಂತರ ಹೋರಾಟದ ಫಲವಾಗಿ ಸರ್ದಾರ್ ವಲ್ಲಬಾಯಿ ಪಟೇಲರ ದಿಟ್ಟತನದ ಕಾರಣ ಈ ಪ್ರದೇಶದ ಜನರು ನಿಜಾಮನಿಂದ ವಿಮೋಚನೆ ಪಡೆದು ಒಂದು ವರ್ಷ, ಒಂದು ತಿಂಗಳು, ಎರಡು ದಿನದ ನಂತರ ಅಂದರೆ ಸೆಪ್ಟೆಂಬರ್ 17, 1948 ರಂದು ಸ್ವಾತಂತ್ರ್ಯ ಹೊಂದಿತು.
ಹೀಗಾಗಿ ಹೈದರಾಬಾದ್ ಕರ್ನಾಟಕದವರು ವರ್ಷದಲ್ಲಿ ಎರಡು ಸಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಅದು ಇಂದಿನ ದಿನವಾದ” ಹೈದರಾಬಾದ್ ಕರ್ನಾಟಕ ” ವಿಮೋಚನಾ ದಿನ.
ಈ ಕುರಿತು ನಿರ್ಮಾಣಗೊಂಡ ಚಲನಚಿತ್ರದ ಕಥಾಹಂದರ: ” ನಿರ್ಗಮನದ ಹಾದಿಯಲ್ಲಿ “- ಕನ್ನಡ ಚಲನಚಿತ್ರ
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿಮೋಚನೆಗಾಗಿ ಗುಲ್ಬರ್ಗ ಪ್ರಾಂತ್ಯದ ಕೆಲವು ಚಳುವಳಿಗಾರರು ತಮ್ಮ ಪ್ರಾಂತ್ಯ ವಿಮೋಚನೆ ಹೊಂದಬೇಕೆಂದು ಹೋರಾಡುವಾಗ ವಸಂತ ಎಂಬ ಗುಲ್ಬರ್ಗ ಪ್ರಾಂತ್ಯದ ಯುವಕನನ್ನು ಹೈದರಾಬಾದ್ ನಿಜಾಮನ ಕಡೆಯವರು ಔರಂಗಬಾದ್ ಜೈಲಿಗೆ ದೂಡುತ್ತಾರೆ. ಅಲ್ಲಿದ್ದ ಹಿರಿಯ ಹೋರಾಟಗಾರರು ಇವನನ್ನು ಆತ್ಮೀಯವಾಗಿ ಕಂಡು ಆತನಿಗೆ ತಮ್ಮ ಎರಡನೇ ಮಗಳನ್ನು ಮದುವೆ ಮಾಡಿ ಕೊಡುವ ವಿಚಾರ ಮಾಡುತ್ತಾರೆ.
ಆ ಹಿರಿಯರ ಮಗಳು ಜಾನಕಿ ಎಂಬಾಕೆ ಮದುವೆಯಾಗಿ ಗುಲ್ಬರ್ಗ ಪ್ರಾಂತ್ಯದ ಕುಗ್ರಾಮದಲ್ಲಿ ನೆಲೆಸುತ್ತಾಳೆ. ವಸಂತ ಇಂದಿನಂತೆ ತನ್ನ ಸ್ವಾತಂತ್ರ್ಯ ಯೋಧ ಹೋರಾಟ ಚಳುವಳಿಯಲ್ಲಿ ಮುಳುಗಿ, ಹೀಗೆ ಸಂಸಾರ ಸಾಗುವಾಗ ಜಾನಕಿಗೆ ಎರಡು ಹೆಣ್ಣು ಮಕ್ಕಳು ಜನಿಸುತ್ತವೆ. ಕಾಲಕ್ರಮೇಣ ವಸಂತ ಪ್ಲೇಗ್ ಕಾಯಿಲೆಯಿಂದ ಸಾಯುತ್ತಾನೆ. ಎರಡು ಮಕ್ಕಳಿಂದ ಜಾನಕಿಯು ತನ್ನ ಮನೆಯಲ್ಲಿ ಆಸ್ತಿ ವಿಷಯಕ್ಕೆ ಎಲ್ಲರಿಂದಲೂ ಮೂದಲಿಕೆ, ದಬ್ಬಾಳಿಕೆ, ಅವಮಾನವನ್ನು ಎದುರಿಸಬೇಕಾಗುತ್ತದೆ.
ಜಾನಕಿ ತನ್ನ ಹಿರಿಯ ಅಕ್ಕ ಕಾಯಿಲೆ ಬಿದ್ದ ಊರ್ಮಿಯನ್ನು ವೈದ್ಯರ ಬಳಿಗೆ ಕರೆ ತಂದಾಗ ಅಲ್ಲಿ ವಿನೋಬ ಭಾವೆ ಪರಿಚಯವಾಗಿ ಅವರಿಂದ ಭೂದಾನ ಚಳುವಳಿಯ ವಿಷಯ ತಿಳಿಯುತ್ತದೆ. ಇತ್ತ ತನ್ನ ಮನೆಯಲ್ಲಿ ಆಸ್ತಿ ವಿಷಯದಲ್ಲಿ ಕಿರಿಕಿರಿ ಹೆಚ್ಚಾಗಿ ಅದರಿಂದ ಪಾರಾಗಲು ದೃಢ ನಿರ್ಧಾರದಿಂದ ತನ್ನ ಗಂಡನ ಮನೆಯ ಆಸ್ತಿಯನ್ನು ವಿನೋಬಾ ಭಾವೆಯವರ ಆಶ್ರಮಕ್ಕೆ ದಾನ ಪತ್ರದ ಮೂಲಕ ಸಹಿ ಹಾಕಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ತನ್ನ ಗಂಡನ ಮನೆಯನ್ನು ತೊರೆದು ನಿರ್ಗಮಿಸುತ್ತಾಳೆ.
ಈ ಚಲನಚಿತ್ರದ ತಾಂತ್ರಿಕ ವರ್ಗ
ಕಥೆ,ಚಿತ್ರಕಥೆ, ಸಂಭಾಷಣೆ, ಗೀತರಚನೆ : ಜ್ಯೋತಿ ಬಿ ಕುಲಕರ್ಣಿ. ಕಲಬುರ್ಗಿ.
ಛಾಯಾಗ್ರಹಣ : ಗೌರಿ ವೆಂಕಟೇಶ್
ಕಲೆ : ಪುರುಷೋತ್ತಮ್
ಸಂಕಲನ : ಬೇಬಿ ನಾಗರಾಜ್ ನಿರ್ದೇಶನ ವಿಭಾಗ: ಹರೀಶ್, ಶಿವಕುಮಾರ್ ಬಿಚ್ಚಾಲೆ, ಶ್ರೀಕಾಂತ್ ಮುಳಬಾಗಿಲು, ಗಗನ್,
ಮೇಕಪ್: ಲಿಂಗರಾಜು ನಿರ್ವಹಣೆ :ಸಾಜೀದ್
ನಿರ್ಮಾಣ: ಶೋ ಫಂಡ್ ಎಂಟರ್ಟೈನ್ಮೆಂಟ್
ನಿರ್ಮಾಪಕ:ಡಾ ll ನಾರಾಯಣ.
ನಿರ್ದೇಶನ : ಮಂಜು ಪಾಂಡವಪುರ
ಕಲಾವಿದರ ಬಳಗ
ತನುಶ್ರೀ ತ್ಯಾಗಿ, ಯಸ್ ನದಾಫ್, ಸಂದೀಪ ನಿನಾಸಂ, ಲಕ್ಷ್ಮಿ ನಾಡಗೌಡ, ಮಠಪತಿ, ಮಹಿಪಾಲ ರೆಡ್ಡಿ ಮುನ್ನೂರು, ಪ್ರಭಾಕರ ಜೋಶಿ, ಮಹೇಶ್ ಬಾಬು ಸುರ್ವೆ ದೇವಿದಾಸ್ ಪವಾರ್ ಗುಲ್ಬರ್ಗ, ಶ್ರೀದೇವಿ ಮೆಳ್ಳೆಗಟ್ಟಿ, ಅಮೃತ, ಸಂತೋಷ್ ಉಪ್ಪಿನ, ವಿಠ್ಠಲ ಕೊಪ್ಪದ್, ದತ್ತಾತ್ರೇಯ ಕುರಹಟ್ಟಿ, ಬಿಜಾಪುರ ಅರ್ಚನಾ, ಪಾಟೀಲ್ ಬಿಜಾಪುರ, ರೇಖಾ ಪಾಟೀಲ್, ಡಿಕೆ ಸೂರ್ಯ, ವಿಜಯ್ ಅಧ್ಯಾಪಕರು, ಎಂ ಎನ್ ಸ್ವಾಮಿ ಹಾಗೂ ಕಲಬುರ್ಗಿಯ ಸಮಸ್ತ ಕಲಾವಿದರು ಅಭಿನಯ ಮಾಡಿದ್ದಾರೆ.