Saval TV on YouTube
ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೋಪಾಲಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ವರ್ಣಮಾಲೆ, ಕನ್ನಡ ಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಪ್ರದರ್ಶಿಸಿ ಕಂಸಾಳೆ, ಕೋಲಾಟ, ವೀರಭದ್ರನ ಕುಣಿತ, ವಿವಿಧ ವೇಷಭೂಷಣಗಳನ್ನು ತೊಟ್ಟು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಆವರಣದಿಂದ ಹೊರಟ ಜಾಥಕ್ಕೆ ಗೋಪಾಲ ಸ್ವಾಮಿ ಸಮೂಹ ಸಂಸ್ಥೆಗಳ ಕರೆಸ್ಪಾಂಡೆಂಟ್ ಆದ ಮಂಜುನಾಥ್ ಅವರ ಕನ್ನಡ ಬಾವುಟದ ಮೂಲಕ ಚಾಲನೆ ನೀಡಿದರು.
ಚಾಮುಂಡಿಪುರಂ ವೃತ್ತ, ನಂಜುಮಳಿಗೆ ಸೇರಿದಂತೆ ಹಲವು ರಸ್ತೆಯಲ್ಲಿ ಜಾಥಾ ಸಂಚರಿಸಿತು.
ಇದೆ ಸಂಧರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಜರಿದ್ದರು.














