ಮನೆ ರಾಜಕೀಯ ನೀರನ್ನು ಸದುಪಯೋಗಪಡಿಸಿಕೊಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ

ನೀರನ್ನು ಸದುಪಯೋಗಪಡಿಸಿಕೊಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ

0

ಬೆಂಗಳೂರು: ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೇ  ಸದುಪಯೋಗ ಪಡಿಸಿಕೊಳ್ಳಬೇಕೆಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು  ಇಂದು ಜಗದೀಶ್ ನಗರದಲ್ಲಿ 7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ  ಸಂಗ್ರಹಾರವನ್ನು ಲೋಕಾರ್ಪಣೆ  ನೆರವೇರಿಸಿ ಮಾತನಾಡಿದರು.

ಈ ಯೋಜನೆಯಿಂದ ಒಂಭತ್ತು ಪ್ರಮುಖ ಬಡಾವಣೆಗಳಿಗೆ ನೀರನ್ನು ಒದಗಿಸಲಾಗುವುದು. ಕೆ.ಆರ್.ಪುರಂನ ಸಮಗ್ರ ಅಭಿವೃದ್ಧಿಗೆ ದಾಖಲೆಯ ಕೆಲಸಗಳನ್ನು ಸಚಿವ ಬಿ.ಎ.ಬಸರಾಜ ಅವರು ಮಾಡಿದ್ದು, ಆ ಪೈಕಿ ಜಿ.ಎಲ್.ಆರ್ ಕೆಲಸವೂ ಒಂದು. ಜನಪರ, ಜನರ ಬಗ್ಗೆ ಕಳಕಳಿ ಇರುವ    ಜನ ಸೇವಕರಾಗಿ ಕೆಲಸವನ್ನು ಭೈರತಿ  ಬಸವರಾಜ ಅವರು  ಮಾಡುತ್ತಿದ್ದಾರೆ ಎಂದರು.

 ಸಚಿವರಾದ ಬಿ.ಎ. ಬಸವರಾಜ, ಡಾ: ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

ಹಿಂದಿನ ಲೇಖನಮನುಕುಲಕ್ಕೆ ಸಾಹಿತ್ಯದ ಬೆಳಕು ಚೆಲ್ಲಿದ ಬೇಂದ್ರೆ: ಮಡ್ಡಿಕೆರೆ ಗೋಪಾಲ್
ಮುಂದಿನ ಲೇಖನಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಂಎಲ್ಸಿ ಹೆಚ್.ವಿಶ್ವನಾಥ್