ಮನೆ ಮನರಂಜನೆ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ಚಿತ್ರಕ್ಕೆ ಬಂತು 10 ಸೈಮಾ ಪ್ರಶಸ್ತಿ 

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ಚಿತ್ರಕ್ಕೆ ಬಂತು 10 ಸೈಮಾ ಪ್ರಶಸ್ತಿ 

0

‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ಅವರು ಪಡೆದ ಜನಪ್ರಿಯತೆ ಸಣ್ಣದಲ್ಲ. ಈ ಸಿನಿಮಾಗೆ 10 ಸೈಮಾ ಪ್ರಶಸ್ತಿ ಬಂದಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Join Our Whatsapp Group

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದು ಮಾತ್ರವಲ್ಲದೇ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇತ್ತೀಚೆಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಬರೋಬ್ಬರಿ 10 ವಿಭಾಗಗಳಲ್ಲಿ ಕಾಂತಾರ ಸಿನಿಮಾಗೆ ಅವಾರ್ಡ್ ಸಿಕ್ಕಿರುವುದು ವಿಶೇಷ.

‘ಕಾಂತಾರ’ ಚಿತ್ರ ಪಡೆದಿರುವ  ಸೈಮಾ ಪ್ರಶಸ್ತಿಗಳು ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ, ಪಾತ್ ಬ್ರೇಕಿಂಗ್ ಸ್ಟೋರಿ: ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ (ಕ್ರಿಟಿಕ್ಸ್): ಸಪ್ತಮಿ ಗೌಡ, ಅತ್ಯುತ್ತಮ ಖಳನಟ: ಅಚ್ಯುತ್ ಕುಮಾರ್, ಅತ್ಯುತ್ತಮ ಸಂಗೀತ ನಿರ್ದೇಶನ: ಅಜನೀಶ್ ಬಿ. ಲೋಕನಾಥ್, ಅತ್ಯುತ್ತಮ ಗಾಯಕ: ವಿಜಯ್ ಪ್ರಕಾಶ್, ಅತ್ಯುತ್ತಮ ಹಾಸ್ಯ ನಟ: ಪ್ರಕಾಶ್ ತುಮ್ಮಿನಾಡು, ಅತ್ಯುತ್ತಮ ಸಾಹಿತ್ಯ: ಪ್ರಮೋದ್ ಮರವಂತೆ, ವಿಶೇಷ ಮೆಚ್ಚುಗೆ ಪ್ರಶಸ್ತಿ: ಮುಕೇಶ್ ಲಕ್ಷ್ಮಣ್  ಹೀಗೆ ಒಟ್ಟು10 ಸೈಮಾ ಪ್ರಶಸ್ತಿಗಳನ್ನು ‘ಕಾಂತಾರ’ ಚಿತ್ರ ಪಡೆದಿದೆ.

ಈ ಬಗ್ಗೆ ರಿಷಬ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ದೈವ ನರ್ತಕರು, ಅಪ್ಪು ಸರ್ ಮತ್ತು ಕನ್ನಡಿಗರಿಗೆ ಈ ಯಶಸ್ಸು ಸಮರ್ಪಣೆ’ ಎಂದ ಅವರು ಬರೆದುಕೊಂಡಿದ್ದಾರೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನNIN: 69 ಫೀಲ್ಡ್ ವರ್ಕರ್, ಎಸ್‌ ಆರ್‌ ಎಫ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ