ಕಪಾಲ = ತಲೆಬುರುಡೆ (ಕೆನ್ನೆ), ‘ಭಾತೀ’ಯೆಂದರೆ ಬೆಳಕು, ಕಾಂತಿ
ಈ ಪ್ರಾಣಾಯಾಮವು ಅಭ್ಯಾಸ ಕ್ರಮದಲ್ಲಿ ‘ಭಸ್ತ್ರಿಕಾ ಪ್ರಾಣಾಯಾಮ’ವನ್ನು ಹೋಲುವು ದಾದರೂ, ಇದು ಅದಕ್ಕಿಂತಲೂ ಸ್ವಲ್ಪ ಹಗುರ ಅಥವಾ ಮೃದು. ಇದರಲ್ಲಿ ಪೂರಕವು ಅಂದರೆ ಉಸಿರನ್ನು ಒಳಕ್ಕೆಳೆಯುವುದು ನಿಧಾನ. ಆದರೆ ಹೊರಕ್ಕೆ ಬಿಡುವುದು ‘ಭಸ್ತ್ರಿಕೆ’ಯಲ್ಲಿರುವಂತೆ ವೇಗ ಮತ್ತು ಬಲವಾದುದು. ಅಲ್ಲದೆ. ಇದರಲ್ಲಿ ಉಸಿರನ್ನು ಹೊರಬಿಟ್ಟ ಮೇಲೆ ಅದನ್ನು ಒಂದು ಸೆಕೆಂಡು ಕಾಲ ನಿಲ್ಲಿಸಿ (ಬಾಹ್ಯಕುಂಭಕ), ಅನಂತರ ಒಳಕ್ಕೆಳೆಯಬೇಕು. ‘ಭಸ್ತ್ರಿಕೆ’ಯ ಅಭ್ಯಾಸವು ತುಂಬಾ ಶ್ರಮ ಕೊಡುವುದಾದರೆ ಅದಕ್ಕೆ ಬದಲಾಗಿ ಈ ‘ಕಪಾಲಭಾತೀ’ಯನ್ನೇ ಕೆಲವು ಸಲ ಆವರ್ತಿಸು ವುದು ಉತ್ತಮ. ಇದರ ಅಭ್ಯಾಸವನ್ನು ಮಾಡಿ ಮುಗಿಸಿದ ಮೇಲೆ, ‘ಶವಾಸನ’ದಲ್ಲಿ ನೆಲದ ಮೇಲೊರಗಬೇಕು.
ಪರಿಣಾಮಗಳು
‘ ಭಸಿಕಾ’ ಮತ್ತು ‘ಕಪಾಲಭಾತಿ’ ಪ್ರಾಣಾಯಾಮಗಳೆರಡು ಪಿತ್ತಕೋಶ, ಗುಲ್ಕ ಮೇದೋ ಜೀರಕ ಮತ್ತು ಕಿಬೊಟ್ಟೆಯ ಅಂಗಗಳಿಗೆ ಒಳ್ಳೆಯ ಹುರುವು ಕೊಟ್ಟು ಅವುಗಳಲ್ಲಿ ಚೈತನ್ಯವನ್ನು ಮೂಡಿಸಲು ನೆರವಾಗುತ್ತವೆ. ಅಲ್ಲದೆ ಇವುಗಳ ಅಭ್ಯಾಸದಿಂದ ಜೀರ್ಣ ಶಕ್ತಿಯು ಹೆಚ್ಚುತ್ತದೆ, ದೇಹದೊಳಗಿನ ಅಂಗಾಂಶದ ಅಥವಾ ಎಲುಬಿನ ಕುಳಿಗಳು (Sinuses) ಸ್ವಚ್ಛವಾಗುತ್ತವೆ ಮತ್ತು ಕಣ್ಣಿಗೆ ತಂಪೊದಗಿ, ಮನಸ್ಸಿಗೆ ಒಂದು ವಿಧವಾದ ಲವಲವಿಕೆಯನ್ನು ಈ ಅಧ್ಯಾಸದಿಂದ ಪಡೆಯಬಹುದು.
ಮುನ್ನೆಚ್ಚರಿಕೆಗಳು
೧. ಹಬೆಯ ಯಂತ್ರದಲ್ಲಿ ಮೊದಲು ಹಬೆಯನ್ನು ಉತ್ಪತ್ತಿ ಮಾಡಿದರೆ ಅದು ಆ ಶಕ್ತಿಯಿಂದ ರೈಲು ಗಾಡಿಗಳನ್ನು ಕಂಬಿಗಳ ಮೇಲೆ ಎಳೆದುಕೊಂಡು ಹೋಗಲು ಸಾಧ್ಯ. ಈ ಹಬೆಯನ್ನು ಉತ್ಪತ್ತಿ ಮಾಡಲು ಕಲ್ಲಿದ್ದಲು ಬೇಕು. ಅದರಂತೆಯೇ ಈ ನಮ್ಮ ಇಡೀ ಶರೀರದ ಚಲನ ವಲನಗಳಿಗಾಗಿ ಚೈತನ್ಯ ಶಕ್ತಿಯನ್ನುಂಟುಮಾಡಲು ‘ಭಸ್ವಿಕಾಪ್ರಾಣಾಯಾಮಾಭ್ಯಾಸವು ಸಹಾಯಕಾರಿ, ಹಬೆಯ ಯಂತ್ರಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚು ಪ್ರಮಾಣದ ಕಲ್ಲಿದ್ದಲನ್ನು ಉಪಯೋಗಿಸಿದರೆ ಅದರಿಂದ ನೀರನ್ನು ಕುದಿಸುವ ಹಂಡೆಯೇ ಸುಟ್ಟು ಹೋಗುತ್ತದೆ. ಅದರಂತೆಯೇ ಆ ‘ಭಸ್ತಿಕಾ’ ಭ್ಯಾಸವನ್ನು ಮಿತಿಮೀರಿ ಮಾಡಿದರೆ, ಅದರಿಂದ ದೇಹಯಂತ್ರಕ್ಕೇ ಧಕ್ಕೆಯುಂಟಾಗುವ ಸಂಭವವುಂಟು. ಏಕೆಂದರೆ, ಇದರಲ್ಲಿ ಉಸಿರಾಟವು ಬಹಳ ವೇಗವಾಗಿ ಆಗುವುದರಿಂದ ದೇಹಕ್ಕೆ ತುಂಬಾ ಶ್ರಮವುಂಟಾಗುವುದು.
೨. ದೇಹಸ್ಥಿತಿಯು ಬಲಹೀನವಾಗಿದ್ದು, ಶ್ವಾಸಕೋಶಗಳ ಶಕ್ತಿ ಕುಂಠಿತವಾಗಿರುವವರು ಈ ”ಭಸ್ತ್ರಿಕಾ’, ಇಲ್ಲವೆ ‘ಕಪಾಲಭಾತೀ’ ಪ್ರಾಣಾಯಾಮಗಳಲ್ಲಿ ಎಂದಿಗೂ ತೊಡಗಬಾರದು.
೩. ಅಲ್ಲದೆ, ಕಿವಿ ಮತ್ತು ಕಣ್ಣುಗಳ ಬೇನೆಗಳಿಂದ, ಅಂದರೆ ಕಿವಿಯಲ್ಲಿ ಸೋರುವುದು, ಕಣ್ಣುಗುಡ್ಡೆಯಲ್ಲಿ ಬಿಗಿತವಾದ ‘ಗ್ಲಾಕೋಮಾ’ (Glaucoma) ಎಂಬ ಕಣ್ಣು ಬೇನೆಯಿಂದ ನರುಳುವವರು ಈ ವಿಧವಾದ ಪ್ರಾಣಾಯಾಮಗಳಿಗೆ ಖಂಡಿತವಾಗಿಯೂ ಕೈ ಹಚ್ಚಬಾರದು.
೪. ಹೆಚ್ಚಿನ ನೆತ್ತರೊತ್ತಡ ಮತ್ತು ಕಡಿಮೆ ನೆತ್ತರೊತ್ತಡದಿಂದ (High or Low Blood Pressure) ಪೀಡಿತರಾದವರಿಗೂ ಈ ಪ್ರಾಣಾಯಾಮಾಭ್ಯಾಸಗಳು ತಕ್ಕುದಲ್ಲ
೫. ಮೂಗಿನಲ್ಲಿ ರಕ್ತ ಸೋರುವುದಾಗಲಿ, ಕಿವಿಪೋಟು ಬರುವುದಾಗಲಿ ತಲೆದೋರುವು ದಾದರೆ ತತ್‌ಕ್ಷಣವೇ ಪ್ರಾಣಾಯಾಮಾಭ್ಯಾಸಗಳನ್ನು ನಿಲ್ಲಿಸಿಬಿಡಬೇಕು.
೬. ಮೇಲೆ ಹೇಳಿದ ಸಂದರ್ಭಗಳಲ್ಲಿ ಮೇಲಿನ ಎರಡು ಪ್ರಾಣಾಯಾಮಗಳಲ್ಲಿ ಯಾವುದನ್ನೂ ಅಭ್ಯಸಿಸಲು ಯತ್ನಿಸಬಾರದು.