ಮನೆ ಕ್ರೀಡೆ ಕರಾಟೆ: ರಾಷ್ಟ್ರಮಟ್ಟಕ್ಕೆ ಕುಶಾಲ್ ಗೌಡ ಆಯ್ಕೆ

ಕರಾಟೆ: ರಾಷ್ಟ್ರಮಟ್ಟಕ್ಕೆ ಕುಶಾಲ್ ಗೌಡ ಆಯ್ಕೆ

0

ಮೈಸೂರು(Mysuru): ಶಿವಮೊಗ್ಗದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಪೊಲೀಸ್ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಕುಶಾಲ್ ಗೌಡ ಆರ್‌.ಟಿ. ಬೆಳ್ಳಿ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ್ದಾರೆ.

ಶಿವಮೊಗ್ಗದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಪೆಂಕಾಕ್ ಸಿಲಾತ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕುಶಾಲ್ ಗೌಡ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾನೆ. ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ತಂಡ 165 ಪಾಯಿಂಟ್ಸ್ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕುಶಾಲ್ ಗೌಡ ಅವರಿಗೆ ಜಿಲ್ಲಾ ಪೆಂಕಾಕ್ ಸಿಲಾತ್ ಸಂಸ್ಥೆ ಎನ್.ಯೋಗೇಶ್, ತರಬೇತುದಾರ ಎಸ್.ನವೀನ್ ಅಭಿನಂದನೆ ಸಲ್ಲಿಸಿದ್ದಾರೆ.

ಕುಶಾಲ್ ಗೌಡ ಅವರು ಪೊಲೀಸ್ ಇಲಾಖೆಯ ಮೈಸೂರು ಜಿಲ್ಲಾ ವೈರ್ ಲೆಸ್ ನಿಯಂತ್ರಣ ಕೇಂದ್ರದಲ್ಲಿ ಸಹಾಯಕ ಸಬ್ ಇನ್ಸ್‌ ಪೆಕ್ಟರ್ ಆಗಿರುವ ಮೋಹನರಂಗ ಹಾಗೂ ಶ್ವೇತಾ ದಂಪತಿಗಳ ಪುತ್ರ ಆಗಿದ್ದಾರೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿಯೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ನಡೆಯಲಿದೆ.

ಹಿಂದಿನ ಲೇಖನಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ದುರಸ್ಥಿಗಾಗಿ ಶಾಲಾ ಮಕ್ಕಳ ಮನವಿ
ಮುಂದಿನ ಲೇಖನಪವಿತ್ರ ಮನಸ್ಸಿನಿಂದ ದಾಂಪತ್ಯಕ್ಕೆ ಕಾಲಿರಿಸಿ