ಮನೆ ಆರೋಗ್ಯ ಕರೇಲಾ-ಜಾಮೂನ್ ಜ್ಯೂಸ್

ಕರೇಲಾ-ಜಾಮೂನ್ ಜ್ಯೂಸ್

0

ಇದರಲ್ಲಿ ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ರಸಗಳಿರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 30 ಮೀ.ಲೀ ಜ್ಯೂಸನ್ನು ಅರ್ಧ ಲೋಟ ನೀರಲ್ಲಿ  ಮಿಶ್ರಣ ಮಾಡಿ ಕುಡಿಯಬೇಕು. ಇದರಿಂದ ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನವಾಗುತ್ತದೆ.

ಇದರ ನಿಯಮಿತ ಸೇವನೆಯಿಂದ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದು.

ದಿನನಿತ್ಯ ಸೇವಿಸುವುದರಿಂದ ಅಸ್ತಮ ರೋಗಿಗಳಿಗೂ ಪ್ರಯೋಜನವಾಗುತ್ತದೆ.

ಕಾಮಾಲೆ ಇರುವವರೆಗೂ ಪ್ರಯೋಜನವಾಗುತ್ತದೆ. ಏಕೆಂದರೆ ಇದು ಪಿತ್ತಕೋಶದ ಆರೋಗ್ಯವನ್ನು ಕಾಪಾಡುತ್ತದೆ.

ಹೊಟ್ಟೆಯಲ್ಲಿರುವ ಹುಳುಗಳನ್ನು ನಿವಾರಿಸುತ್ತದೆ. ಮಲಬದ್ಧತೆ ಮತ್ತು ಮೂಲವ್ಯಾಧಿ ವಿರುದ್ಧ ರಕ್ಷಣೆ ನೀಡುತ್ತದೆ.

ಫ್ಯಾಟ್ ರೆಡ್ಯೂಸರ್ ಜ್ಯೂಸ್ :

ದೇಹದಲ್ಲಿ ಬೊಜ್ಜು ಸಂಗ್ರಹವಾಗಿದ್ದರೆ ದೇಹದ ತೂಕ ಹೆಚ್ಚಾಗಿದ್ದರೆ ಈ ಜ್ಯೂಸ್ ಸೇವನೆಯಿಂದ ಪ್ರಯೋಜನವಾಗುತ್ತದೆ.

ನಮ್ಮ ಅನೇಕ ಕಾಯಿಲೆಗಳಿಗೆ ಬೊಜ್ಜು ಮತ್ತು ದೇಹದ ಅತಿತೂಕ ಕಾರಣವಾಗಿರುತ್ತದೆ. ಈ ಜ್ಯೂಸ್ ನ ಸೇವನೆಯಿಂದ ದೇಹದ ಅತಿಯಾದ ಕೊಬ್ಬು ನಿವಾರಣೆಯಾಗುತ್ತದೆ.

ಸಂಧಿವಾತದಂತಹ ಹಲವಾರು ನೋವಿನ ಸಮಸ್ಯೆಗಳಿಗೆ ದೇಹದ ಅತಿತೂಕ ಕಾರಣವಾಗಿರುತ್ತದೆ. ಆದ್ದರಿಂದ ದೇಹದ ತೂಕ ಹೆಚ್ಚಾಗಿರುವ ಸಂಧಿವಾತದ ರೋಗಿಗಳಿಗೆ ಈ ಜ್ಯೂಸ್ ಬಹಳ ಉಪಕಾರಿ.

ಉಸಿರಾಟ ಅಸ್ತಮಾ ಹೃದಯ ಸಮಸ್ಯೆಗಳು ಹಾಗೂ ಚರ್ಮದ ಸಮಸ್ಯೆಗಳಿರುವವರಿಗೆ ಇದು ಉಪಯುಕ್ತ.

ಬಳಸುವ ವಿಧಾನ : ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 30 ಮೀ.ಲೀ. ಜ್ಯೂಸನ್ನು ಅರ್ಧ ಲೋಟ ನೀರಲ್ಲಿ ಮಿಶ್ರಣ ಮಾಡಿ ಕುಡಿಯಬೇಕು. ರಾತ್ರಿ ಊಟಮಾಡಿದ ಒಂದು ಗಂಟೆಯ ಬಳಿಕ 30 ಮೀ.ಲೀ. ಜ್ಯೂಸ್ ಕುಡಿಯಬೇಕು.

ಸ್ಟೋನ್ ಕ್ರಾಕರ್ ಜ್ಯೂಸ್ (ಮೂತ್ರಕಲ್ಲು ನಿವಾರಕ) ಜ್ಯೂಸ್ :  

ತ್ರಿಪಲಾ, ಚಿರಾಯತ, ವರುಣಾಚಲ್, ಅಮೃತಬಳ್ಳಿ, ಅಡುಗೆಸೋಗೆ, ಬೇವು, ಗೋಪುರ, ಪಾಷಣಭೇದ, ಬ್ರಾಹ್ಮಿ, ಮುಂತಾದ ಅಪೂರ್ವ  ಗಿಡಮೂಲಿಕೆಗಳಿಂದ ಮಾಡಿರುವ ಈ ಜ್ಯೂಸ್ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುತ್ತದೆ. ಮೂತ್ರಾಂಗ ವ್ಯೂಹದ ಆರೋಗ್ಯವನ್ನು ರಕ್ಷಿಸುತ್ತದೆ.

ಬಳಸುವ ವಿಧಾನ : ಈ 6 ಚಮಚದಷ್ಟು ರಸವನ್ನು 30 ಮೀ.ಲೀ. ಆಹಾರಕ್ಕೆ ಮೊದಲು ದಿನದಲ್ಲಿ ಎರಡು ಸಲದಂತೆ ಕುಡಿಯಬೇಕು. ಪೌಡರ್ ಆದರೆ ಒಂದು ಚಮಚ ಪೌಡರ್ ಅನ್ನು ನೀರು ಅಥವಾ ಹಣ್ಣಿನ ರಸಕ್ಕೆ ಸೇರಿಸಿ ಕುಡಿಯಬೇಕು.

ಹೈ. ಬಿ.ಪಿ. ಕಂಟ್ರೋಲ್ ಜ್ಯೂಸ್ :

ಸರ್ಪಗಂಧ, ರುದ್ರಾಕ್ಷಿ, ತುಳಸಿ, ಶಂಕಪುಷ್ಪ, ಜಟಾಮಾಂಸಿಯಾಂತಹ ಅಪೂರ್ವ ಗಿಡಮೂಲಿಕೆಗಳಿಂದ ತಯಾರಾದ ಈ ಜ್ಯೂಸ್ ರಕ್ತದ ಅಧಿಕ ಒತ್ತಡವನ್ನು ಶಮನಗೊಳಿಸುತ್ತದೆ. ಉಸಿರಾಟ ಸಂಬಂಧಿಸಿದವರು ನಿವಾರಿಸುತ್ತದೆ.

ಮಾನಸಿಕ ಒತ್ತಡ ನಿವಾರಿಸಿ ದೇಹಕ್ಕೆ ಶಕ್ತಿ ಒದಗಿಸಿರುತ್ತದೆ. ಹೃದಯದ ಕಾರ್ಯಕ್ಷಮತೆಯನ್ನು ಕಾಪಾಡುತ್ತದೆ. ಸೊಂಪಾಗಿ ನಿದ್ರೆ ಬರಲು ನೆರವಾಗುತ್ತದೆ.

ಬಳಸುವ ವಿಧಾನ :- 6 ಚಮಚದಷ್ಟು ರಸವನ್ನು 30 ಮೀ.ಲೀ. ಆಹಾರಕ್ಕೆ ಮೊದಲು ದಿನದಲ್ಲಿ ಎರಡು ಸಲದಂತೆ ಕುಡಿಯಬೇಕು ಅಥವಾ ಹಣ್ಣಿನ ರಸಕ್ಕೆ ಸೇರಿಸಿಕುಡಿಯಬೇಕು.