ಮನೆ ಆರೋಗ್ಯ ಕೊರೊನಾ: 4362 ಹೊಸ ಪ್ರಕರಣ ಪತ್ತೆ

ಕೊರೊನಾ: 4362 ಹೊಸ ಪ್ರಕರಣ ಪತ್ತೆ

0

ನವದೆಹಲಿ: ದೇಶದಲ್ಲಿ 24 ಗಂಟೆಗಳಲ್ಲಿ 4,362 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ 66 ಸಾವು ಸಂಭವಿಸಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,15,102ಕ್ಕೆ ಏರಿದೆ.

ದೇಶದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 54,118ರಷ್ಟಿದೆ.ಈವರೆಗೆ ದೇಶದಲ್ಲಿ 178 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.