ಬೆಳಗಾವಿ: ಕರ್ನಾಟಕದ ದೃಷ್ಟಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ (ನ.5) ಬೆಳಗಾವಿಯಲ್ಲಿ ಮಾತನಾಡಿದ ಅವರು ಚುನಾವಣೆ ಬಂದಾಗಲೊಮ್ಮೆ ಬಿಜೆಪಿ ಯವರಿಗೆ ರಾಮಮಂದಿರ ನೆನಪಾಗುತ್ತದೆ. ಅದೇ ರೀತಿ ಮಹಾರಾಷ್ಟ್ರಕ್ಕೆ ಚುನಾವಣೆ ಬಂದಾಗ ಗಡಿ ವಿವಾದ ನೆನಪಾಗುತ್ತದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರಾಳ ದಿನಾಚರಣೆ ಮಾಡುತ್ತಾರೆ ಎಂದರೆ ಗಡಿ ವಿವಾದ ಇದೆ ಎಂಬ ಅರ್ಥವಲ್ಲ.
ನಮ್ಮ ದೃಷ್ಟಿಯಿಂದ ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.