ಹಾಸನ: ಇನ್ನು ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ ಆಗುತ್ತದೆ. ಆ ಮೂಲಕ ಕೆಇಬಿ ಖಾಸಗಿ ಕರಣ ಆಗುತ್ತೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಆಲೂರು ಪಟ್ಟಣದಲ್ಲಿ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಇಬಿ ಸಾಲದಲ್ಲಿದೆ. ನಾನಿದ್ದಾಗ ಮೀಸಲು ಹಣ ಇಟ್ಟಿದ್ದೆ. ಕಾಂಗ್ರೆಸ್ ಸರ್ಕಾರ ವಿದ್ಯುತ್ ಇಲಾಖೆ ಖಾಸಗಿ ಕರಣ ಮಾಡುತ್ತಿದೆ. ಈ ಸರ್ಕಾರ ಚುನಾವಣೆ ಪೂರ್ವದಲ್ಲಿ ಆರನೇ ಗ್ಯಾರಂಟಿ ಹೇಳಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ನೀಡಿಲ್ಲ. ಪ್ರಧಾನಿಯವರು ದೇವೇಗೌಡರನ್ನು ಯಾವ ರೀತಿ ಗೌರವಿಸುತ್ತಾರೆ. ಕಾಂಗ್ರೆಸ್ನವರು ಬೇಕಾದಾಗ ಉಪಯೋಗಿಸಿ ದೂರ ತಳ್ಳುತ್ತಾರೆ. ಕುಮಾರಸ್ವಾಮಿ ಅವರ ಸರ್ಕಾರ ತೆಗೆದಿದ್ದು ಯಾರು? ಯಾವ ಯಾವ ಲೋಕಸಭಾ ಸದಸ್ಯರು ಏನು ಮಾಡಿದಾರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಪಕ್ಷವನ್ನು ಕಾಂಗ್ರೆಸ್ ಕೈ ಹಿಡಿತಾರೆ. ಅಲ್ಪ ಸಂಖ್ಯಾತರಿಗೆ ಯಾವಾಗ ಟೋಪಿ ಹಾಕುತ್ತಾರೆ ಗೊತ್ತಿಲ್ಲ. ಬಿಜೆಪಿಗಾಗಿ ಅವರು ಮುಸ್ಲಿಂನ ಹಿಡಿದುಕೊಂಡಿದಾರೆ. ದೇವೇಗೌಡರು ಮೀಸಲಾತಿ ಕೊಟ್ಟರು. ಅಲ್ಪ ಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದು ದೇವೇಗೌಡರು. ಕಾಂಗ್ರೆಸ್ನವರು ಕೇವಲ ಮುಸಲ್ಮಾನರ ಮತ ತಗೊಂಡರು. ಆದರೆ ಅವರಿಗೆ ಮೀಸಲಾತಿ ಕೊಟ್ಟಿದ್ದ ದೇವೇಗೌಡರು. ಕಾಂಗ್ರೆಸ್ ಮೀಸಲಾತಿ ಕೊಟ್ಟಿದ್ದರೆ ಹೇಳಲಿ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆ ಆದ ಮೇಲೆ ಯಾವ ಗ್ಯಾರಂಟಿ ಇರಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಸರಾಯಿ ನಿಷೇಧ ಮಾಡಿದರು. ಈಗ ಹೆಣ್ಮಕ್ಕಳು ಬೀದಿ ಬೀದಿಲಿ ಎಣ್ಣೆ ಅಂಗಡಿ ಆಗಿದೆ ಅಂತಿದಾರೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಎಣ್ಣೆ ರೇಟ್ ಜಾಸ್ತಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಇದು ಬಡವರ ಸರ್ಕಾರ ಅಲ್ಲ. ಕುಮಾರಸ್ವಾಮಿ ಇದ್ದಾಗ ಕೊಡುತ್ತೆ ಎಂದು ಹೊರಟಿತ್ತು. ಈಗ ಜೋಡೆತ್ತು ಎಲ್ಲಿ ಅಂತಾರೆ. ದೇವೇಗೌಡರನ್ನು, ಕುಮಾರಸ್ವಾಮಿ ಅವರನ್ನು ಉಳಿಸಿದ್ದು ದೇವರು. 2024ಕ್ಕೆ ಮೋದಿಯವರು ಪ್ರಧಾನಿ ಆಗಬೇಕು, ದೇಶ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.