Saval TV on YouTube
ತಿರುವನಂತಪುರಂ(Thiruvananthapuram): ಕೇರಳದಲ್ಲಿ ನಿಷೇಧಿತ ಪಿಎಫ್’ಐ ಸಂಘಟನೆಯ ಮುಖಂಡರ ಮನೆಗಳು ಹಾಘೂ ಹಲವು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್’ಐಎ) ದಾಳಿ ನಡೆಸಿದೆ.
ಕೇರಳದ 56 ಸ್ಥಳಗಳಲ್ಲಿ ದಾಳಿಯು ಬುಧವಾರ ತಡರಾತ್ರಿಯಿಂದ ಆರಂಭಗೊಂಡಿದ್ದು, ಗುರುವಾರವೂ ಮುಂದುವರಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ.
ರಾಷ್ಟ್ರದಲ್ಲಿ ಉಗ್ರ ಕೃತ್ಯಗಳಿಗೆ ಬೆಂಬಲಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕಳೆದ ಸೆಪ್ಟೆಂಬರ್ನಲ್ಲಿ ಎನ್’ಐಎನ ಹಲವು ತಂಡಗಳು ದೇಶದಾದ್ಯಂತ ದಾಳಿ ನಡೆಸಿದ್ದವು.
ಕೇರಳ ಸೇರಿದಂತೆ 15 ರಾಜ್ಯಗಳಲ್ಲಿ ಹಲವು ಪಿಎಫ್’ಐ ಮುಖಂಡರನ್ನು ಬಂಧಿಸಿತ್ತು. ಇದನ್ನು ಪಿಎಫ್’ಐ ವಿರುದ್ಧದ ಅತಿದೊಡ್ಡ ತನಿಖಾ ಕಾರ್ಯಾಚರಣೆ ಎನ್ನಲಾಗಿತ್ತು.