ಮನೆ ಅಪರಾಧ ಮೈಸೂರು: ಗಿರವಿಗಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ

ಮೈಸೂರು: ಗಿರವಿಗಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ

0

ಮೈಸೂರು(Mysuru): ಗಿರವಿಗಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿ ನೇಮರಾಮ್‌ ಸಿರ್ವಿಯನ್ನು ಕುವೆಂಪು ನಗರ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನಗರದ ವಿವೇಕಾನಂದ ನಗರದ ಮಾರುತಿ ಜ್ಯುವೆಲ್ಲರಿ ಹಾಗೂ ಬ್ಯಾಂಕರ್ಸ್‌’ನ ನೇಮರಾಮ್‌ ಸಿರ್ವಿ 10 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದ. ಈತನನ್ನು ನಂಬಿ ಹಲವಾರು ಚಿನ್ನವನ್ನು ಗಿರವಿಗಿಟ್ಟಿದ್ದರು. ಹೊಸ ಆಭರಣಗಳನ್ನು ತಯಾರಿಸುವ ಸಂಬಂಧ ಮುಂಗಡ ಹಣ ನೀಡಿದ್ದರು.

ನ.9ರಂದು ಏಕಾಏಕಿ ಅಂಗಡಿಯ ಬಾಗಿಲುಮುಚ್ಚಿ ಆಭರಣ ಸಮೇತ ಆರೋಪಿ ಪರಾರಿಯಾಗಿದ್ದನು. ಅಂಗಡಿ ಕಟ್ಟಡದ ಮಾಲೀಕರಿಂದಲೂ ಹಣ ಪಡೆದು ವಂಚಿಸಿದ್ದ. ಈ ಕುರಿತು ಕುವೆಂಪುನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ರಾಜಸ್ಥಾನಕ್ಕೆ ತೆರಳಿದ ಆರೋಪಿ ಪಾಲಿ ಜಿಲ್ಲೆಯ ಒಪೊರಿಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ.

ಆರೋಪಿ ಬಂಧನ ಸಂಬಂಧ ಕುವೆಂಪು ನಗರ ಠಾಣೆಯ ಪೊಲೀಸರ ತಂಡವು ರಾಜಸ್ಥಾನಕ್ಕೆ ತೆರಳಿತ್ತು. ಆತನ ಊರಿನಲ್ಲಿ ಹುಡುಕಾಟ ನಡೆಸಿತ್ತು. ಪೊಲೀಸ್‌ ತಂಡವು ಊರಿಗೆ ಬಂದಿರುವುದನ್ನು ಸ್ನೇಹಿತರ ಮೂಲಕ ತಿಳಿದ ಆರೋಪಿ ಅಲ್ಲಿಂದ ಕೂಡ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ. ಅಲ್ಲಿಯೂ ಬೆನ್ನತ್ತಿ ಆರೋಪಿಯನ್ನು ಬಂಧಿಸಿ, ನಗರಕ್ಕೆ  ಕರೆತಂದಿದ್ದಾರೆ.

ನೇಮಿರಾಜ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಆಭರಣ ಗಿರವಿಗಿಟ್ಟ ಹಲವು ಮಂದಿ ಕುವೆಂಪು ನಗರ ಠಾಣೆಗೆ ಬಂದು ದೂರು ನೀಡಲು ಆರಂಭಿಸಿದ್ದಾರೆ. ಹೊಸ ಆಭರಣ ತಯಾರಿಕೆಗೆ ಮುಂಗಡವಾಗಿ 30 ಮಂದಿ ಹಣ ನೀಡಿದ್ದು ಗೊತ್ತಾಗಿದೆ. ತನಿಖೆ ನಡೆಯುತ್ತಿದ್ದು, ವಂಚನೆಯ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ತಿಳಿಸಿದರು.

ಹಿಂದಿನ ಲೇಖನಆಟೋ – ದ್ವಿಚಕ್ರ ವಾಹನ ನಡುವೆ ಅಪಘಾತ: ಮೂವರ ಸ್ಥಿತಿ ಗಂಭೀರ
ಮುಂದಿನ ಲೇಖನಕೇರಳ: ನಿಷೇಧಿತ  ಪಿಎಫ್’ಐ ಸಂಘಟನೆಯ ಮುಖಂಡರ ಮನೆ ಮೇಲೆ ಎನ್’ಐಎ ದಾಳಿ