ಮನೆ ಮನರಂಜನೆ ‘ಕೆಜಿಎಫ್ 2’ ಫಸ್ಟ್ ಲಿರಿಕಲ್ ಸಾಂಗ್ ಬಿಡುಗಡೆ

‘ಕೆಜಿಎಫ್ 2’ ಫಸ್ಟ್ ಲಿರಿಕಲ್ ಸಾಂಗ್ ಬಿಡುಗಡೆ

0

ಕೆಜಿಎಫ್ 2 ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ‘ತೂಫಾನ್’ ಇಂದು ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಟ ರಾಕಿಂಗ್ ಸ್ಟಾರ್  ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’  ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ ಮಾರ್ಚ್ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. 

‘ತೂಫಾನ್’ ಎಂಬ ಲಿರಿಕಲ್ ಸಾಂಗ್  ಇಂದು ಬಿಡುಗಡೆ ಆಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಯೂಟ್ಯೂಬ್ ಸೇರಿದಂತೆ ಇತರೇ ಸಾಮಾಜಿಕ ಜಾಲತಾಣಗಳಲ್ಲಿ  ಸಾಂಗ್ ವೈರಲ್  ಆಗಿದೆ.

ಇಂದು ಬೆಳಗ್ಗೆ 11.07ಕ್ಕೆ ‘ತೂಫಾನ್’ ಲಿರಿಕಲ್ ವಿಡಿಯೋ ಬಿಡುಗಡೆ ಆಯಿತು. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್ ಹಾಡು ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.

ಇನ್ನು ಕೆಜಿಎಫ್ 2 ಫಸ್ಟ್ ರಿಲಿಕಲ್ ಸಾಂಗ್ ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ಬಿಡುಗಡೆ ಆಗಿದೆ. ಎಲ್ಲ ಭಾಷೆಯಲ್ಲೂ ಜನರಿಂದ ಸಖತ್ ರಿಯಾಕ್ಷನ್ ಸಿಗುತ್ತಿದೆ.

ಈ ಹಾಡಿನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ಬರೆದು, ಸಂಗೀತ ನೀಡಿದ್ದಾರೆ. ಇನ್ನು ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ಪುನೀತ್ ರುದ್ರರಂಗ, ವರ್ಷಾ ಆಚಾರ್ಯ ಸೇರಿದಂತೆ ಅನೇಕ ಗಾಯಕರು ದನಿ ನೀಡಿದ್ದಾರೆ. ಜೊತೆಗೆ ಜ್ಯೂನಿಯರ್ ಸಿಂಗರ್ ಸಹ ಹಾಡಿದ್ದಾರೆ.

ಹಿಂದಿನ ಲೇಖನಬೈಕ್ ನಂಬರ್‌ ಪ್ಲೇಟ್ ಮೇಲೆ ನಂಬರ್ ಬದಲು Grandson of Nagercoil MLA MR Gandhi
ಮುಂದಿನ ಲೇಖನಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ನಲ್ಲಿ ’83’ ಚಿತ್ರ ರಿಲೀಸ್ !