ಮನೆ ರಾಜಕೀಯ ಮುಸ್ಲಿಂ ಸಂತೃಪ್ತಿಗೆ ಮಲ್ಲಿಕಾರ್ಜುನ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

ಮುಸ್ಲಿಂ ಸಂತೃಪ್ತಿಗೆ ಮಲ್ಲಿಕಾರ್ಜುನ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

0

ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ರಾಜಕಾರಣಿ ಈ ರೀತಿ ಮಾತನಾಡಿರುವುದು ನೋವುಂಟಾಗಿದೆ. ಆರ್ ಎಸ್ಎಸ್ ನ ಸ್ವಯಂ ಸೇವಕರನ್ನು ಕೊಲ್ಲಿ ಎಂದಿರುವುದು ಸರಿಯಲ್ಲ. ಈ ಹೇಳಿಕೆ ನನಗೆ ಆಶ್ಚರ್ಯ ತಂದಿದೆ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿದರು.

Join Our Whatsapp Group

ಆರ್.ಎಸ್.ಎಸ್‌. ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು.

ವ್ಯಕ್ತಿತ್ವ ನಿರ್ಮಾಣ ಮಾಡುವ ಸಂಸ್ಥೆ ಆರ್ ಎಸ್ಎಸ್ ದೇಶದ ಜನರು ಆರ್ ಎಸ್ಎಸ್ ಒಪ್ಪಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಜಾಗೃತಿ ಉಂಟು ಮಾಡುವ ಆರ್ ಎಸ್ಎಸ್ ಬಗ್ಗೆ ಮಾತನಾಡಬಾರದಿತ್ತು. ಆರ್ ಎಸ್ಎಸ್‌ ನ ಸ್ವಯಂ ಸೇವಕನೇ ಈಗ ದೇಶದ ಪ್ರಧಾನಮಂತ್ರಿ ಆಗಿದ್ದಾರೆ. ದೇಶದ ಜನರು ಆರ್ ಎಸ್ಎಸ್ ನ ಮೋದಿಯನ್ನು ಒಪ್ಪಿದ್ದಾರೆ. ಹಿಂದೆ ನೆಹರೂ ಹಾಗೂ ಕಾಂಗ್ರೆಸ್ ನ ನಾಯಕರು ಆರ್ ಎಸ್ಎಸ್ ಬ್ಯಾನ್ ಮಾಡಲು ಹೊರಟಿದ್ದರು. ಅವರನ್ನೇ ನಾವು ಲೆಕ್ಕಕ್ಕಿಟ್ಟುಕೊಂಡಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯ ರಾಜಕಾರಣಿ ಈ ರೀತಿ ಮಾತನಾಡಬಾರದಿತ್ತು. ಮುಸಲ್ಮಾನರನ್ನು ಸಂತೃಪ್ತಿಗೊಳಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ವಕ್ಫ್ ಆಸ್ತಿ ವಿಚಾರದಲ್ಲಿ ಇದೇ ರೀತಿ ಮುಂದುವರೆದರೆ, ಮುಸಲ್ಮಾನರನ್ನು ಕೊಲ್ಲುವ ಸ್ಥಿತಿ ಬರುತ್ತದೆ ಎಂದಿದ್ದೆ. ಆದರೆ ನಾನು ಅವರನ್ನು ಕೊಲ್ಲಿ ಎಂದು ನಾನು ಹೇಳಿಲ್ಲ. ಅದನ್ನೇ ಇಟ್ಟುಕೊಂಡ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ. ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥೈಸದೆ ಕೇಸು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನವರು ಮೆರವಣಿಗೆ ಬೇರೆ ನಡೆಸುತ್ತಾರೆ ಎಂದು ಟೀಕಿಸಿದರು.

ಬಿಜೆಪಿ ಬಗ್ಗೆ 40 % ಆರೋಪದ ಬಗ್ಗೆ ಲೋಕಾಯುಕ್ತ ವರದಿ ವಿಚಾರಕ್ಕೆ ಮಾತನಾಡಿ, ನನ್ ಬಗ್ಗೆಯೂ ಈ ಬಗ್ಗೆ ಆರೋಪ ಬಂದಿತ್ತು. ಆಗಲೇ ನಾನು ರಾಜಿನಾಮೆ ಕೊಟ್ಟಿದ್ದೆ. ನಾನು ಶುಭ್ರ ಎಂಬುದು ಸಾಬೀತಾಗಿದೆ. ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ನನ್ನ ವಿರುದ್ಧ ಪೋಕ್ಸೋ ಕೇಸು ಇಲ್ಲ. ಆಗ ಈ ಬಗ್ಗೆ ಕೆಂಪಣ್ಣ ಆರೋಪ ಮಾಡಿದ್ದರು. ಈಗ ಅವರಿಲ್ಲದಾಗ ಅವರ ಬಗ್ಗೆ ಮಾತನಾಡಲ್ಲ.  ಆದರೆ ನನ್ನ ಬಗ್ಗೆ ಆರೋಪ ಮಾಡಿದವರು ಕ್ಷಮೆ ಕೋರಲಿ ಎಂದರು.