ಮನೆ ರಾಜ್ಯ ಹನೂರು: ಮಧ್ಯರಾತ್ರಿ ಶಾಲೆಗೆ ನುಗ್ಗಿ ಆಹಾರ ಪದಾರ್ಥ ಸೇವಿಸಿದ ಕರಡಿ

ಹನೂರು: ಮಧ್ಯರಾತ್ರಿ ಶಾಲೆಗೆ ನುಗ್ಗಿ ಆಹಾರ ಪದಾರ್ಥ ಸೇವಿಸಿದ ಕರಡಿ

0

ಹನೂರು (ಚಾಮರಾಜನಗರ): ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿ ನುಗ್ಗಿದ್ದು, ಆಹಾರ ಪದಾರ್ಥಗಳನ್ನು ತಿನ್ನುವುದರ ಜತೆಗೆ ಪೀಠೋಪಕರಗಳನ್ನು ಮುರಿದು ಹಾಕಿದೆ.

ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ ಬೀರುಬಾಗಿಲನ್ನು‌ ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ತಿಂದಿದೆ.

ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶುಕ್ರವಾರ ಬೆಳಿಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಅವರು ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಪುಸ್ತಕ, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಸಿಸಿ ಕ್ಯಾಮೆರಾ ನೋಡಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ.

ಕೂಡಲೇ ಫಾದರ್ ಟೆನ್ನಿ ಕುರಿಯನ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಟೆನ್ನಿ ಕುರಿಯನ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನತುಮಕೂರು: ಯುವತಿಯಂತೆ ನಟಿಸಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿದ್ದ ಯುವಕನ ಬಂಧನ
ಮುಂದಿನ ಲೇಖನವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಳ: ಜನವರಿ 1 ರಿಂದ ಪರಿಷ್ಕೃತ ದರ ಜಾರಿ